Publish Date: Wed, 23 Sep 2015 (16:05 IST)
Updated Date: Wed, 23 Sep 2015 (16:14 IST)
ಮೀಸಲಾತಿ ಕುರಿತು ವಿವಾದಾತ್ಮಕ ಕಾಮೆಂಟ್‌ಗಳನ್ನು ಮಾಡಿದ್ದ ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕ ಆರ್‌ಎಸ್ಸೆಸ್ ವಿರುದ್ಧ ನಿತೀಶ್ ಕುಮಾರ್ ವಾಗ್ದಾಳಿ ಮಾಡುತ್ತಾ, ಆರ್‌ಎಸ್‌ಎಸ್ ಬಿಜೆಪಿಗೆ ಸುಪ್ರೀಂಕೋರ್ಟ್ ರೀತಿಯಲ್ಲಿದೆ ಎಂದು ವಿಶ್ಲೇಷಿಸಿದ್ದಾರೆ. ಆರ್‌ಎಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಪ್ರತಿಕ್ರಿಯೆಗಳು ಅಪಾಯಕಾರಿ ಮತ್ತು ಸಂವಿಧಾನಬಾಹಿರ ಎಂದು ಬಿಹಾರ ಮುಖ್ಯಮಂತ್ರಿ ತಿಳಿಸಿದರು.
ಆರ್‌ಎಸ್‌ಎಲ್ ಏನು ಹೇಳಿದರೂ ಅದು ಅಂತಿಮ ನುಡಿಯಾಗಿರುತ್ತದೆ. ಆರ್‌ಎಸ್‌ಎಸ್ ಎದುರು ಬಿಜೆಪಿ ಸ್ಥಾನವೇನು ಎಂದು ನಿತೀಶ್ ಕುಮಾರ್ ಪ್ರಶ್ನಿಸಿದರು. ಆರ್‌ಎಸ್‌ಎಸ್ ಮುಖವಾಣಿ ಆರ್ಗನೈಸರ್‌ಗೆ ನೀಡಿದ ಸಂದರ್ಶನದಲ್ಲಿ, ಕೋಟಾವನ್ನು ಅನೇಕವರ್ಷಗಳ ಕಾಲ ರಾಜಕೀಯ ಅಸ್ತ್ರವಾಗಿ ಬಳಸಲಾಗಿದ್ದು, ಯಾರಿಗೆ ಮೀಸಲಾತಿ ಸೌಲಭ್ಯವನ್ನು ಎಷ್ಟು ಕಾಲ ನೀಡಬೇಕು ಎಂದು ಪರಿಶೀಲಿಸಲು ರಾಜಕೀಯೇತರ ಸಮಿತಿಯನ್ನು ನೇಮಿಸಬೇಕೆಂದು ಮೋಹನ್ ಭಾಗವತ್ ಸಲಹೆ ಮಾಡಿದ್ದರು.
ಆರ್‌ಎಸ್‌ಎಸ್ ಯಾರಿಗೆ ಕೋಟಾ ಸಿಗಬೇಕು ಎಂಬ ಬಗ್ಗೆ ನಿರ್ಧರಿಸಲು ಸಂವಿಧಾನೇತರ ಅಧಿಕಾರವನ್ನು ಬಯಸುತ್ತದೆ. ಅವರ ಪ್ರಸ್ತಾವನೆಗಳು ಎಷ್ಟು ಅಪಾಯಕಾರಿಯಾಗಿವೆ ನೋಡಿ ಎಂದು ಕುಮಾರ್ ಪ್ರತಿಕ್ರಿಯಿಸಿ ಬಿಜೆಪಿಯ ಸಚಿವರು ಸ್ವಯಂಸೇವಕರಾಗಲು ಹೆಮ್ಮೆ ಪಡುತ್ತಾರೆ ಎಂದು ಅಣಕವಾಡಿದರು.