Select Your Language

Notifications

webdunia
webdunia
webdunia
webdunia

ಆರೆಸ್ಸೆಸ್ ನೋಂದಣಿಯಾಗದ ಸಂಸ್ಥೆ ದೇಣಿಗೆ ಲೆಕ್ಕ ಕೊಡಲಿ: ದಿಗ್ವಿಜಯ್ ಸಿಂಗ್

ದಿಗ್ವಿಜಯ್ ಸಿಂಗ್
ಪಣಜಿ , ಭಾನುವಾರ, 24 ಜುಲೈ 2016 (16:26 IST)
ರಾಷ್ಟ್ರೀಯ ಸ್ವಯಂ ಸೇವಕ ಸಂಘ ನೋಂದಣಿಯಾಗದ ಸಂಸ್ಥೆಯಾಗಿದ್ದು, ವಿಶೇಷವಾಗಿ ಗುರು ಪೂರ್ಣಮಾ ದಿನದಂದು ಮತ್ತು ವರ್ಷಾಂತ್ಯದವರೆಗೆ ಸಂಗ್ರಹಿಸಿದ ದೇಣಿಗೆಯ ಬಗ್ಗೆ ವಿವರ ಬಹಿರಂಗಪಡಿಸುವಂತೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಒತ್ತಾಯಿಸಿದ್ದಾರೆ.
 
ಆರೆಸ್ಸೆಸ್ ಸಂಸ್ಥೆ ನೋಂದಾಯಿತವಾಗದ ಸಂಸ್ಥೆಯಾಗಿದೆ. ಆದ್ದರಿಂದ ಆರೆಸ್ಸೆಸ್ ನಿಷೇಧಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
 
ಆರೆಸ್ಸೆಸ್ ಸಂಸ್ಥೆ ಗುರು ಪೂರ್ಣಿಮಾ ಹಬ್ಬದಂದು ಭಾರಿ ಪ್ರಮಾಣದಲ್ಲಿ ದೇಣಿಗೆ ಸಂಗ್ರಹಿಸುತ್ತದೆ. ದೇಣಿಗೆಯ ಬಗ್ಗೆ ಯಾವುದೇ ವಿವರಗಳು ಲಭ್ಯವಿಲ್ಲ. ಗುರು ದಕ್ಷಿಣೆ ರೂಪದಲ್ಲಿ ಎಷ್ಟು ಪ್ರಮಾಣದಲ್ಲಿ ದೇಣಿಗೆ ಸಂಗ್ರಹಿಸಲಾಗುತ್ತದೆ. ಯಾವ ದೇಣಿಗೆಯ ಬಗ್ಗೆ ಲೆಕ್ಕವಿಲ್ಲ ಎಂದು ತಿರುಗೇಟು ನೀಡಿದ್ದಾರೆ.
 
ಆರೆಸ್ಸೆಸ್ ನೋಂದಾಯಿತ ಸಂಸ್ಥೆಯಾಗಿರದ ಹಿನ್ನೆಲೆಯಲ್ಲಿ ಯಾವುದೇ ಕಾಯ್ದೆಯಡಿ ಬರುವುದಿಲ್ಲ. ದೇಣಿಗೆ ಬಂದ ಹಣ ಎಲ್ಲಿ ಹೋಗುತ್ತಿದೆ ಎನ್ನುವ ಬಗ್ಗೆ ಆರೆಸ್ಸೆಸ್ ಬೆಳಕು ಚೆಲ್ಲಬೇಕಾಗಿದೆ ಎಂದರು.
 
ಗುಜರಾತ್ ರಾಜ್ಯದ ಉನಾ ಜಿಲ್ಲೆಯಲ್ಲಿ ದಲಿತರ ಮೇಲೆ ನಡೆದ ದೌರ್ಜನ್ಯ ಕುರಿತಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಆರೆಸ್ಸೆಸ್ ಬೆಂಬಲಿತ ಸಂಘಟನೆಗಳೂ ಕೂಡಾ ನೋಂದಣಿಯಾಗಿಲ್ಲ. ಸ್ಥಳೀಯ ಪೊಲೀಸರ ನೆರವಿನಿಂದ ದೇಣಿಗೆ ಸಂಗ್ರಹಿಸುತ್ತಿವೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಆರೋಪಿಸಿದ್ದಾರೆ. 

 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಅಸಭ್ಯ ಪದ ಬಳಕೆಗೆ ಬಿಜೆಪಿ-ಬಿಎಸ್‌ಪಿಯಲ್ಲಿ ಸ್ಪರ್ಧೆ ಏರ್ಪಟ್ಟಿದೆ: ಅಖಿಲೇಶ್ ಯಾದವ್