ಅಗ್ನಿಪಥ್ ಸೇನಾ ನೇಮಕಾತಿ ಯೋಜನೆ ಖಂಡಿಸಿ ಬಿಹಾರದಲ್ಲಿ ನಡೆಯುತ್ತಿರುವ ಪ್ರತಿಭಟನೆಯಿಂದ ಇದುವರೆಗೆ ರೈಲ್ವೆಗೆ 700 ಕೋಟಿ ರೂ.ನಷ್ಟವುಂಟಾಗಿದ್ದು, 718 ಜನರನ್ನು ಬಂಧಿಸಲಾಗಿದೆ.
ಕಳೆದ ನಾಲ್ಕು ದಿನಗಳಿಂದ ಬಿಹಾರದಲ್ಲಿ ನಡೆಯುತ್ತಿರುವ ಪ್ರತಿಭಟನೆಯಿಂದ 11 ಇಂಜಿನ್ ಸೇರಿದಂತೆ 60 ರೈಲಿನ ಬೋಗಿಗಳು ಬೆಂಕಿಗೆ ಆಹುತಿಯಾಗಿದೆ.ಇದಲ್ಲದೇ ರೈಲ್ವೆ ಆಸ್ತಿ ನಷ್ಟ ಸೇರಿದಂತೆ ರೈಲ್ವೆ ಇಲಾಖೆಗೆ ಒಟ್ಟಾರೆ ಆಗಿರುವ ನಷ್ಟ ಸುಮಾರು 700 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಬಿಹಾರದ 16 ಜಿಲ್ಲೆಗಳಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ಪೊಲೀಸರು ಇದುವರೆಗೆ 718 ಮಂದಿಯನ್ನು ಬಂಧಿಸಿದ್ದು, ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಇನ್ನಷ್ಟು ಮಂದಿಯನ್ನು ಬಂಧಿಸುವ ನಿರೀಕ್ಷೆ ಇದೆ.
ಒಂದು ಬೋಗಿಗೆ 80 ಲಕ್ಷ ರೂ.ವೆಚ್ಚವಾಗುತ್ತದೆ. ಹವಾನಿಯಂತ್ರಿತ ಸೇರಿದ ಸ್ಲಿಪರ್ ಕೋಚ್ ಗೆ 1.25 ಕೋಟಿ ರೂ.ವೆಚ್ಚವಾಗುತ್ತದೆ. ರೈಲ್ವೆ ಇಂಜಿನ್ 20 ಕೋಟಿ ರೂ. ಖರ್ಚಾಗಲಿದ್ದು, ವೇಗ ಆಧರಿಸಿ ಅದರ ಮೊತ್ತ ಹೆಚ್ಚಳವಾಗುತ್ತದೆ. 12 ಕೋಟಿಗೆ 40 ಕೋಟಿ ರೂ. ನಷ್ಟ ಉಂಟಾಗಿದೆ. 24 ಕೋಚ್ ಗೆ 70 ಕೋಟಿ ರೂ.ನಂತೆ ಒಟ್ಟಾರೆ 700 ಕೋಟಿ ರೂ. ನಷ್ಟವುಂಟಾಗಿದೆ ಎಂದು ರೈಲ್ವೆ ಇಲಾಖೆ ವಿವರ ನೀಡಿದೆ.