Select Your Language

Notifications

webdunia
webdunia
webdunia
webdunia

ಉದ್ಘಾಟನೆಗೆ 24 ಗಂಟೆಗಳಿರುವಂತೆಯೇ ಕುಸಿದ ಆಣೆಕಟ್ಟು: 389 ಕೋಟಿ ನೀರುಪಾಲು

ಉದ್ಘಾಟನೆಗೆ 24 ಗಂಟೆಗಳಿರುವಂತೆಯೇ ಕುಸಿದ ಆಣೆಕಟ್ಟು: 389 ಕೋಟಿ ನೀರುಪಾಲು
ಭಾಗಲ್ಪುರ್: , ಬುಧವಾರ, 20 ಸೆಪ್ಟಂಬರ್ 2017 (16:19 IST)
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಉದ್ಘಾಟನಾ ಸಮಾರಂಭಕ್ಕೆ 24 ಗಂಟೆಗಳ ಮುಂಚೆಯೇ 389.31 ಕೋಟಿ ರೂ. ವೆಚ್ಚದಿಂದ ನಿರ್ಮಿಸಲಾದ ಆಣೆಕಟ್ಟು ಕುಸಿದು ಹೋದ ಆಘಾತಕಾರಿ ಘಟನೆ ವರದಿಯಾಗಿದೆ.
ಜಿಲ್ಲಾಡಳಿತದ ಕಾರ್ಯವನ್ನು ಸಮರ್ಥಿಸಿಕೊಂಡಿರುವ  ಜಲ ಸಂಪನ್ಮೂಲ ಖಾತೆ ಸಚಿವ ಲಾಲನ್ ಸಿಂಗ್, ಒಂದೇ ಬಾರಿಗೆ ಆಣೆಕಟ್ಟಿನಿಂದ ನೀರು ಹೊರಬಿಟ್ಟಿರುವುದು ಡ್ಯಾಂ ಕುಸಿಯಲು ಕಾರಣವಾಗಿದೆ ಎಂದು ತಿಳಿಸಿದ್ದಾರೆ. 
 
ಭಾಗಲ್ಪುರ್‌ನ ಕಹಲ್‌ಗಾಂವ್‌ನಲ್ಲಿ ನೀರಾವರಿ ಯೋಜನೆಯಡಿ ರಾಜ್ಯ ಸರಕಾರ 389.31 ಕೋಟಿ ರೂಪಾಯಿ ವೆಚ್ಚದಲ್ಲಿ ಬತೇಶ್ವರಸ್ಥಾನ್ ಗಂಗಾ ಪಂಪ್ ಕಾಲುವೆ ಯೋಜನೆಯಡಿ ಆಣೆಕಟ್ಟು ನಿರ್ಮಾಣ ಮಾಡಿತ್ತು.
 
ಅಣೆಕಟ್ಟಿನಲ್ಲಿ ನೀರು ಸಂಗ್ರಹಿಸಿ ರೈತರಿಗೆ ಅನುಕೂಲವಾಗುವಂತೆ ಮಾಡಲು ನಿರ್ಮಿಸಲಾಗಿತ್ತು. ಆಣೆಕಟ್ಟು ಒಡೆದು ಹೋಗಿದ್ದರಿಂದ ಕೆಳಮಟ್ಟದ ಪ್ರದೇಶಗಳ ಅನೇಕ ಮನೆಗಳಿಗೆ ನೀರು ನುಗ್ಗಿ ಪ್ರವಾಹ ಪರಿಸ್ಥಿತಿ ಎದುರಿಸಬೇಕಾಗಿ ಬಂದಿತು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ಫೋಟೊ ತೆಗೆದವರ ವಿರುದ್ಧ ಕ್ರಿಮಿನಲ್ ಕೇಸ್: ಮುನಿರತ್ನ