Select Your Language

Notifications

webdunia
webdunia
webdunia
webdunia

ರಾಜ್ಯಸಭೆಗೆ ರೂಪಾ ಗಂಗೂಲಿ?

ರಾಜ್ಯಸಭೆಗೆ ರೂಪಾ ಗಂಗೂಲಿ?
ನವದೆಹಲಿ , ಬುಧವಾರ, 5 ಅಕ್ಟೋಬರ್ 2016 (08:47 IST)
ಮಹಾಭಾರತದ ದ್ರೌಪದಿ ಪಾತ್ರದಿಂದ ಹೆಸರುವಾಸಿಯಾಗಿರುವ ನಟಿ ಪರಿವರ್ತಿತ ರಾಜಕಾರಣಿ ರೂಪಾ ಗಂಗೂಲಿ ಅವರನ್ನು ಭಾರತೀಯ ಜನತಾ ಪಕ್ಷ ರಾಜ್ಯಸಭಾ ಸದಸ್ಯತ್ವಕ್ಕೆ ನಾಮನಿರ್ದೇಶನಗೊಳಿಸಿದೆ. 
ಇತ್ತೀಚಿಗಷ್ಟೇ ಪಕ್ಷ ತೊರೆದಿದ್ದ ಕ್ರಿಕೆಟಿಗ, ರಾಜಕಾರಣಿ ನವಜೋತ್ ಸಿಂಗ್ ಸಿಧು ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ರೂಪಾ ಅವರನ್ನು ಸೂಚಿಸಲಾಗಿದೆ. 
 
2015ರಲ್ಲಿ ಅಧಿಕೃತವಾಗಿ ಬಿಜೆಪಿ ಸೇರಿದ್ದ ರೂಪಾ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಿ ರತನ್ ಶುಕ್ಲಾ ವಿರುದ್ಧ ಸೋತಿದ್ದರು. 
 
1988ರ ಅತ್ಯಂತ ಜನಪ್ರಿಯ ಹಿಂದಿ ಧಾರವಾಹಿ ಮಹಾಭಾರತದಿಂದ ಅಪಾರ ಜನಪ್ರಿಯತೆಯನ್ನು ಗಳಿಸಿದ್ದ ರೂಪಾ ಹಿಂದಿ, ಬಂಗಾಲಿ ಚಲನಚಿತ್ರಗಳಲ್ಲೂ ನಟಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಗೋವಾ ಚುನಾವಣೆ ಬಳಿಕ ಮಹದಾಯಿ ವಿವಾದ ಇತ್ಯರ್ಥ: ಖರ್ಗೆ