Select Your Language

Notifications

webdunia
webdunia
webdunia
webdunia

ಆರ್.ಕೆ. ನಗರ ಉಸಪಚುನಾವಣೆ ರದ್ದುಮಾಡಿದ ಚುನಾವಣಾ ಆಯೋಗ

ಆರ್.ಕೆ. ನಗರ ಉಸಪಚುನಾವಣೆ ರದ್ದುಮಾಡಿದ ಚುನಾವಣಾ ಆಯೋಗ
ಚೆನ್ನೈ , ಸೋಮವಾರ, 10 ಏಪ್ರಿಲ್ 2017 (09:29 IST)
ಭಾರೀ ಚುನಾವಣಾ ಅಕ್ರಮ ಕಂಡುಬಂದ ಹಿನ್ನೆಲೆಯಲ್ಲಿ ಏಪ್ರಿಲ್ 12ರಂದು ನಡೆಯಬೇಕಿದ್ದ ಚೆನ್ನೈನ ಆರ್.ಕೆ. ನಗರ ಉಪಚುನಾವಣೆಯನ್ನ ಚುನಾವಣಾ ಆಯೋಗ ರದ್ದು ಮಾಡಿದೆ. ಆರೋಗ್ಯ ಸಚಿವ ವಿಜಯಭಾಸ್ಕರ್ ಮನೆ ಮೇಲೆ ಐಟಿ ದಾಳಿ ವೇಳೆ ಮತದಾರರಿಗೆ ಮತಕ್ಕಾಗಿ ಹಣ, ಉಡುಗೊರೆಗಳನ್ನ ನೀಡಿದ್ದ ಬಗ್ಗೆ ಹಲವು ದಾಖಲೆಗಳು ಪತ್ತೆಯಾಗಿದ್ದವು. ಈ ಮಾಹಿತಿಯನ್ನ ಆದಾಯ ತೆರಿಗೆ ಇಲಾಖೆ ಚುನಾವಣಾ ಆಯೋಗಕ್ಕೆ ರವಾನಿಸಿತ್ತು. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಉಪಚುನಾವಣೆಯನ್ನ ರದ್ದು ಮಾಡಲಾಗಿದೆ.

ಈ ಕುರಿತಂತೆ 29 ಪುಟಗಳ ವಿವರಣೆ ನೀಡಿರುವ ಚುನಾವಣಾ ಆಯೋಗ, ಉಪಚುನಾವಣೆಗೆ ಕೈಗೊಂಡ ಕ್ರಮಗಳು, ಚುನಾವಣಾ ಅಕ್ರಮ, ರದ್ದು ಮಾಡುತ್ತಿರುವುದಕ್ಕೆ ಕಾರಣಗಳನ್ನ ನೀಡಿದೆ. ನಿಷ್ಪಕ್ಷಪಾತ ಚುನಾವಣೆ ನಡೆಸಲು ಪಕ್ವವಾದ ಬಳಿಕ ಉಪಚುನಾವಣಾ ದಿನಾಂಕ ಪ್ರಕಟಿಸುವುದಾಗಿ ಆಯೋಗ ಹೇಳಿದೆ.

ಮಾಜಿ ಸಿಎಂ ಜಯಲಲಿತಾ ನಿಧನದ ಬಳಿಕ ತೆರವಾಗಿದ್ದ ಆರ್.ಕೆ. ನಗರ ಕ್ಷೇತ್ರದಲ್ಲಿ ಉಪಚುನಾವಣೆ ಘೋಷಿಸಲಾಗಿತ್ತು. ಪ್ರತಿಷ್ಠೆಯ ಕಣವಾಗಿದ್ದ ಈ ಕ್ಷೇತ್ರದಲ್ಲಿ ಅಣ್ಣಾಡಿಎಂಕೆಯ ಶಶಿಕಲಾ ಮತ್ತು ಪನ್ನೀರ್ ಸೆಲ್ವಂ ಬಣಗಳು ಶತಾಯಗತಾಯ ಗೆಲ್ಲುವ ಪಣ ತೊಟ್ಟಿದ್ದವು. ಚಿಹ್ನೆ ವಿಷಯದಲ್ಲೂ ಗದ್ದಲ ನಡೆದು, ಎರಡೂ ಬಣಗಳಿಗೂ ಬೇರೆ ಬೇರೆ ಚಿಹ್ನೆ ನೀಡಲಾಗಿತ್ತು. ಈ ಮಧ್ಯೆ, ಉಪಚುನಾವಣೆಯಲ್ಲಿ 90 ಕೋಟಿ ರೂ. ಮತಕ್ಕಾಗಿ ೆ ಎಂಬ ಮಾಹಿತಿ ಐಟಿ ದಾಳಿ ವೇಳೆ ಸಿಕ್ಕಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಸಾವಿರ ರೂ. ವ್ಯವಹಾರ ನಡೆಸಿ 1 ಕೋಟಿ ರೂ. ಗೆದ್ದ ಗ್ರಾಹಕ!