ನೋಯ್ಡಾದಲ್ಲಿ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರು ನಿಗೂಢವಾಗಿ ಸಾವನ್ನಪ್ಪಿದ್ದಾರೆ.
ದೆಹಲಿ ಬಳಿಯ ನೋಯ್ಡಾ ಸೆಕ್ಟರ್ 119ರಲ್ಲಿ ಘಟನೆ ನಡೆದಿದ್ದು ನಿವೃತ್ತ ರೈಲ್ವೆ ಅಧಿಕಾರಿಯಾಗಿದ್ದ ವಿಜಯ್ ಕುಮಾರ್ (65) ಅಪಾರ್ಟ್‌ಮೆಂಟ್‌ನ 19 ನೇ ಮಹಡಿಯಿಂದ ಬಿದ್ದು ದುರ್ಮರಣವನ್ನಪ್ಪಿದ್ದಾರೆ.
ಆಮ್ರಪಾಲಿ ಪ್ಲಾಟಿನಮ್ ಸೊಸೈಟಿಯಲ್ಲಿ ವಾಸವಾಗಿದ್ದ ಅವರ ಶವ ನಿನ್ನೆ ತಡರಾತ್ರಿ ಅಪಾರ್ಟಮೆಂಟ್ ಬಳಿ ಪತ್ತೆಯಾಗಿದೆ
ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ಶಂಕಿಸಿದ್ದು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.