Webdunia - Bharat's app for daily news and videos

Install App

ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ : ಇಮ್ರಾನ್ ಖಾನ್

Webdunia
ಮಂಗಳವಾರ, 8 ಮಾರ್ಚ್ 2022 (13:46 IST)
ಇಸ್ಲಾಮಾಬಾದ್ : ಪಾಕಿಸ್ತಾನದ ಪ್ರಧಾನ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಇಮ್ರಾನ್ ಖಾನ್ ಅವರಿಗೆ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷ ಬಿಲವಾಲ್ ಭಟ್ಟೊ ಜರ್ದಾರಿ ಅವರು 24 ಗಂಟೆಗಳ ಗಡುವನ್ನು ನೀಡಿದ್ದಾರೆ.

ದೇಶದಲ್ಲಿ ಇಮ್ರಾನ್ ಖಾನ್ ಅವರ ಆಡಳಿತ ಮತ್ತು ಆರ್ಥಿಕ ಬಿಕ್ಕಟ್ಟಿಗೆ ಅಸಮಾಧಾನ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ರಾಜೀನಾಮೆಗೆ ಜರ್ದಾರಿ ಆಗ್ರಹಿಸಿದ್ದಾರೆ. ಇಮ್ರಾನ್ ಖಾನ್ ಸರ್ಕಾರ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ನಡುವಿನ ಆಪಾದಿತ ಸಂಬಂಧವನ್ನು ಜರ್ದಾರಿ ಉಲ್ಲೇಖಿಸಿದ್ದಾರೆ.

ದೇಶವು ಸರ್ಕಾರದ ಆರ್ಥಿಕ ನೀತಿಗಳನ್ನು ತಿರಸ್ಕರಿಸಿದೆ. ಪಿಟಿಐಎಂಎಫ್ (ಪಿಟಿಐ+ಐಎಂಎಫ್) ವಿರುದ್ಧ ಪ್ರತಿಭಟನೆಗಳಾಗುತ್ತಿವೆ ಎಂದು ಜರ್ದಾರಿ ತಿಳಿಸಿದ್ದಾರೆ.

ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಕೈಗೊಂಬೆ ಎಂದು ಟೀಕಿಸಿರುವ ಜರ್ದಾರಿ ಅವರು, ಸಾಮಾನ್ಯ ಜನರು ಹಣದುಬ್ಬರದ ಸುನಾಮಿಯಲ್ಲಿ ಮುಳುಗುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.   ಇಮ್ರಾನ್ ಖಾನ್ ಸರ್ಕಾರ ಸಾಲಕ್ಕಾಗಿ ಭಿಕ್ಷೆ ಬೇಡುತ್ತಿದೆ.

ಜನರು ಇನ್ನು ಮುಂದೆ ಸರ್ಕಾರದವರು ಮಾಡಿರುವ ಪ್ರಮಾದಗಳನ್ನು ಹೊರೆಯನ್ನು ಹೊರಲು ಸಾಧ್ಯವಿಲ್ಲ. ಇಮ್ರಾನ್ ಅವರು ಕಂಬಿಗಳ ಹಿಂದೆ ಇರುವುದು ಸರಿ. ವಿದೇಶಿ ಹಣದ ಪ್ರಕರಣದಲ್ಲಿ ಅವರನ್ನು ಜವಾಬ್ದಾರರನ್ನಾಗಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Stray Dog Attack: ದಾಳಿಯ ಭೀಕರತೆಗೆ ಉಳಿದಿದ್ದು ಮಗುವಿನ ಮುಖದ ಮೂಳೆಗಷ್ಟೇ

Bengaluru: ಸೂಟ್‌ಕೇಸ್‌ನಲ್ಲಿ ಬಾಲಕಿಯ ಶವ ಪತ್ತೆ ಪ್ರಕರಣ: ಬಿಹಾರದ 7ಮಂದಿಯ ಬಂಧನ

Kedarnath, ತಾಂತ್ರಿಕ ದೋಷ: ಹೆದ್ದಾರಿಯಲ್ಲೇ ಭೂಸ್ಪರ್ಶವಾದ ಹೆಲಿಕಾಪ್ಟರ್‌, Video

ನನಗೆ ಹೆಸರು ಬೇಡ, ಸಾಯುವ ಮುನ್ನಾ ನಿಮ್ಮ ಋಣ ತೀರಿಸುತ್ತೇನೆ: ಕುಮಾರಸ್ವಾಮಿ ಕಣ್ಣೀರು

Bengaluru Stampede: ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ವಿರುದ್ಧ ದೂರು ದಾಖಲು

ಮುಂದಿನ ಸುದ್ದಿ
Show comments