ನವದೆಹಲಿ : ಕೇಂದ್ರ ಸರ್ಕಾರ ಕಚೇರಿಗಳಲ್ಲಿ ಅನಗತ್ಯ ಫೈಗಳನ್ನು ತೆಗೆದು ಹಾಕಬೇಕೆಂದು ಪ್ರಧಾನಿ ನರೇಂದ್ರ ಮೋದಿ ಎಲ್ಲ ಇಲಾಖೆಗಳಿಗೆ ನಿರ್ದೇಶನ ನೀಡಿದ್ದಾರೆ.ಮೋದಿಯವರ ಆದೇಶದಂತೆ ಅಕ್ಟೋಬರ್ ತಿಂಗಳು ಪೂರ್ತಿ ಫೈಲ್ ಕ್ಲೀನಿಂಗ್ ಆಪರೇಷನ್ ಆಗಲಿದ್ದು, ಈ ಹಿನ್ನೆಲೆ ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಸ್ಥಳಾವಕಾಶದ ವಿಷಯದಲ್ಲಿ ರಾಷ್ಟ್ರಪತಿ ಭವನದ ಎರಡು ಪಟ್ಟು ಜಾಗವನ್ನು ಫೈಲ್ಗಳಿಂದ ಮುಕ್ತಗೊಳಿಸಬಹುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಕಚೇರಿಗಳಲ್ಲಿ 7.3 ಲಕ್ಷ ಫೈಲ್ಗಳನ್ನು ತೆಗೆದು ಹಾಕಿದ್ದರಿಂದ 3.18 ಲಕ್ಷ ಚದರ ಅಡಿ ಜಾಗ ಇದುವರೆಗೂ ಫೈಲ್ಗಳಿಂದ ಮುಕ್ತವಾಗಿದೆ. ರಾಷ್ಟ್ರಪತಿ ಭವನದ ವಿಸ್ತೀರ್ಣ 2 ಲಕ್ಷ ಚದರ ಅಡಿ. ಇದರ ಎರಡು ಪಟ್ಟು ಜಾಗ ಈಗ ಫೈಲ್ ಗಳಿಂದ ಮುಕ್ತವಾಗಿದೆ. 9.31 ಲಕ್ಷ ಫೈಲ್ಗಳನ್ನು ತೆಗೆದು ಹಾಕಬೇಕೆಂದು ಗುರಿ ಹಾಕಿಕೊಳ್ಳಲಾಗಿದ್ದು, ಇದುವರೆಗೂ ಶೇ. 78ರಷ್ಟು ಕೆಲಸ ಪೂರ್ಣವಾಗಿದೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ಹೇಳಿದ್ದಾರೆ.