Select Your Language

Notifications

webdunia
webdunia
webdunia
webdunia

ಧರ್ಮ ದೇಶದ ಮೂಲತಳಹದಿ, ನಿರ್ಲಕ್ಷಿಸುವಂತಿಲ್ಲ: ಮೋಹನ್ ಭಾಗವತ್

ಧರ್ಮ ದೇಶದ ಮೂಲತಳಹದಿ, ನಿರ್ಲಕ್ಷಿಸುವಂತಿಲ್ಲ: ಮೋಹನ್ ಭಾಗವತ್
ಯಾವತ್‌ಮಲ್ , ಭಾನುವಾರ, 9 ಅಕ್ಟೋಬರ್ 2016 (12:48 IST)
ಧರ್ಮ ದೇಶದ ಮೂಲತಳಹದಿಯಾಗಿದ್ದರಿಂದ ಅದನ್ನು ನಿರ್ಲಕ್ಷಿಸುವಂತಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
 
ಜನ ಸಂಘ ಸಂಸ್ಥಾಪಕ ದೀನ್ ದಯಾಳ್ ಉಪಾಧ್ಯಾಯ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಭಾಗವತ್, ದೇಶದ ಮೂಲವನ್ನು ಮರೆಯುವಂತಿಲ್ಲ. ದೇಶದ ಮೂಲವೇ ಧರ್ಮವಾಗಿದೆ ಎಂದು ತಿಳಿಸಿದ್ದಾರೆ. 
 
ದೇಶವನ್ನು ನಾವು ಕುಟುಂಬ ಎಂದು ಕರೆಯುತ್ತೇವೆ. ಕೌಟಂಬಿಕ ಧರ್ಮವನ್ನು ಪಾಲಿಸಬೇಕಾಗಿದೆ. ಭಾರತದ ಸಿದ್ದಾಂತ, ಸಂಸ್ಕ್ರತಿ ದೇಶದ ಮಹತ್ವದ ಸಾರವನ್ನು ಸಾರುತ್ತವೆ ಎಂದು ಅಭಿಪ್ರಾಯಪಟ್ಟರು. 
 
ಸಾವಿರಾರು ವರ್ಷಗಳ ಹಿಂದೆಯೇ ಭಾರತ ವಿಶ್ವದ ಪ್ರಮುಖ ದೇಶಗಳಲ್ಲಿ ಒಂದಾಗಿತ್ತು. ಆದರೆ, ತದನಂತರ ಬಂದ ವಿದೇಶಿ ಅಡಳಿತಗಾರರಿಂದ ಜನಪ್ರಿಯತೆ ಕುಸಿಯತೊಡಗಿತು. ರೈತರು ರಸಾಯನಿಕ ಗೊಬ್ಬರವನ್ನು ಬಳಸುವ ಬದಲಿಗೆ ಸಾವಯುವ ಗೊಬ್ಬರವನ್ನು ಬಳಸುವಂತೆ ಅಂದೇ ಎಚ್ಚರಿಕೆ ನೀಡಿದ್ದರು ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ- ಪಾಕಿಸ್ತಾನಕ್ಕೆ ಯುದ್ಧ ಉತ್ತಮ ಆಯ್ಕೆಯಲ್ಲ: ಪಾಕ್ ರಾಯಭಾರಿ