Publish Date: Fri, 07 Apr 2017 (11:40 IST)
Updated Date: Fri, 07 Apr 2017 (11:44 IST)
ಮುಂಬೈ: ಮೂರು ತಿಂಗಳು ಉಚಿತ ಆಫರ್ ಇದೆ ಎಂದು ಖುಷಿಪಟ್ಟುಕೊಂಡಿದ್ದ ಗ್ರಾಹಕರಿಗೆ ರಿಲಯನ್ಸ್ ಜಿಯೋ ಶಾಕ್ ಕೊಟ್ಟಿದೆ. ಜಿಯೋ ಸಮ್ಮರ್ ಸರ್ಪೈಸ್ ಆಫರ್ ರದ್ದುಗೊಳಿಸಿದೆ.
ಏಪ್ರಿಲ್ 15 ರೊಳಗೆ 99 ರೂ. ನೀಡಿ ಪ್ರಾಥಮಿಕ ಸದಸ್ಯತ್ವ ಪಡೆದುಕೊಂಡು 303 ರೂ, ರಿಚಾರ್ಜ್ ಮಾಡುವ ಗ್ರಾಹಕರಿಗೆ ಉಚಿತ ಮೂರು ತಿಂಗಳ ಆಫರ್ ನೀಡುತ್ತೇವೆಂದು ಈ ಹಿಂದೆ ರಿಲಯನ್ಸ್ ಘೋಷಿಸಿತ್ತು. ಆದರೆ ಇದೀಗ ಅದನ್ನು ರದ್ದುಗೊಳಿಸಿದೆ.
ಭಾರತೀಯ ಟೆಲಿಕಾಂ ಪ್ರಾಧಿಕಾರ (ಟ್ರಾಯ್) ಸೂಚನೆ ಮೇರೆಗೆ ಆಫರ್ ಹಿಂಪಡೆದಿರುವುದಾಗಿ ಸಂಸ್ಥೆ ಹೇಳಿಕೊಂಡಿದೆ. ಹಾಗಿದ್ದರೂ, ಗುರುವಾರದವರೆಗೆ 303 ರೂ. ರೀಚಾರ್ಜ್ ಮಾಡಿದವರಿಗೆ ಉಚಿತ ಆಫರ್ ನೀಡುವುದಾಗಿ ಪ್ರಕಟಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ