ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ರಾಜಕೀಯ ಅವಧಿ ಕಡಿಮೆಯಾಗಿರಬಹುದು. ಆದರೆ, ಅಂದು ಅಲಹಾಬಾದ್ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸಲಾಗಿಲ್ಲ ಎನ್ನುವ ಪಶ್ಚಾತಾಪ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರಪ್ರಶಸ್ತಿ ವಿಜೇತ 73 ವರ್ಷ ವಯಸ್ಸಿನ ಅಮಿತಾಬ್ ಬಚ್ಚನ್, 1984ರಲ್ಲಿ ನಟನೆಗೆ ಗುಡ್‌ಬೈ ಹೇಳಿ ಕುಟುಂಬದ ಗೆಳೆಯರಾಗಿದ್ದ ರಾಜೀವ್ ಗಾಂಧಿಯವರ ಸಲಹೆ ಮೇರೆಗೆ ರಾಜಕೀಯ ಪ್ರವೇಶಿಸಿದ್ದರು. ಬಚ್ಚನ್ ಅಲಹಾಬಾದ್ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಭಾರಿ ಬಹುಮತದಿಂದ ಜಯಗಳಿಸಿ ಸಂಸತ್ ಪ್ರವೇಶಿಸಿದ್ದರು.
ಆದರೆ, ಅಮಿತಾಬ್ ಅವರು ಮೂರು ವರ್ಷಗಳ ನಂತರ ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಚುನಾವಣೆ ಪ್ರಚಾರದಲ್ಲಿ ಜನರಿಂದ ಮತಗಳನ್ನು ಪಡೆಯಲು ನಾವು ಜನತೆಗೆ ಅನೇಕ ಅಶ್ವಾಸನೆಗಳನ್ನು ನೀಡುತ್ತೇವೆ. ಆದರೆ, ಈಡೇರಿಸಲು ಸಾಧ್ಯವಾಗದಾಗ ತುಂಬಾ ವಿಷಾದವಾಗುತ್ತದೆ ಎಂದು ತಿಳಿಸಿದ್ದಾರೆ.
ರಾಜಕೀಯ ಪ್ರವೇಶಿಸಿರುವುದು ಭಾವನಾತ್ಮಕ ವಿಷಯವಾಗಿದೆ. ಆದರೆ, ರಾಜಕೀಯ ಪ್ರವೇಶಿಸಿದ ನಂತರ ರಾಜಕಾರಣದಲ್ಲಿ ಭಾವನೆಗಳಿಗೆ ಬೆಲೆಯಿಲ್ಲ ಎನ್ನುವುದು ಗೊತ್ತಾಯಿತು. ನಾನು ನನ್ನ ಗೆಳೆಯನಿಗೆ ಸಹಾಯ ಮಾಡಲು ಬಯಸಿದ್ದೆ ಎಂದು ಹೇಳಿದ್ದಾರೆ.
ನನ್ನ ಭಾವನೆಗಳಿಗೆ ಯಾವಾಗ ರಾಜಕೀಯದಲ್ಲಿ ಬೆಲೆಯಿಲ್ಲ ಎನ್ನುವುದು ಗೊತ್ತಾಗುತ್ತಿದ್ದಂತೆ ರಾಜಕೀಯ ತೊರೆಯಲು ನಿರ್ಧರಿಸಿದೆ. ನಾನು ರಾಜಕಾರಣಕ್ಕೆ ಸೂಕ್ತ ವ್ಯಕ್ತಿಯಲ್ಲ ಎಂದು ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ