Select Your Language

Notifications

webdunia
webdunia
webdunia
webdunia

ಕೇಜ್ರಿವಾಲ್ ಕೈಗೊಂಡ ಈ ನಿರ್ಧಾರ ಇಡೀ ದೇಶಕ್ಕೆ ಮಾದರಿ

ಕೇಜ್ರಿವಾಲ್ ಕೈಗೊಂಡ ಈ ನಿರ್ಧಾರ ಇಡೀ ದೇಶಕ್ಕೆ ಮಾದರಿ
ನವದೆಹಲಿ , ಶನಿವಾರ, 19 ಆಗಸ್ಟ್ 2017 (14:03 IST)
ವಿದ್ಯಾರ್ಥಿಗಳಿಂದ ವಸೂಲಿ ಮಾಡಿರುವ ಹೆಚ್ಚುವರಿ ಶುಲ್ಕ ವಾಪಸ್ ನೀಡದಿದ್ದರೆ ಶಾಲೆಗಳನ್ನ ಸರ್ಕಾರ ವಶಕ್ಕೆ ಪಡೆಯುವುದಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಖಾಸಗಿ ಶಾಲೆಗಳಿಗೆ ಎಚ್ಚರಿಕೆ ನೀಡಿದ್ದಾರೆ.
 

449 ಖಾಸಗಿ ಶಾಲೆಗಳಿಗೆ ಶೋಕಾಸ್ ನೋಟಿಸ್ ನೀಡಿರುವ ದೆಹಲಿ ಸರ್ಕಾರ 2 ವಾರಗಳ ಗಡುವು ವಿಧಿಸಿದೆ. ಆಮ್ ಆದ್ಮಿ ಸರ್ಕಾರ ಶಾಲಾ ಆಡಳಿತದ ವಿಷಯದಲ್ಲಿ ಮೂಗು ತೂರಿಸುವುದಿಲ್ಲ. ಆದರೆ, ಆಡಳಿತದಲ್ಲಿ ಶಿಸ್ತು ತರಲು ಪ್ರಯತ್ನ ನಡೆಸುತ್ತೇವೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

6ನೇ ವೇತನ ಆಯೋಗದ ಜಾರಿ ಕಾರಣವೊಡ್ಡಿ ಪೋಷಕರಿಂದ ಅತಿಯಾದ ಶುಲ್ಕ ವಸೂಲಿ ಮಾಡುತ್ತಿರುವ ಬಗ್ಗೆ ಜಸ್ಟೀಸ್ ಅನಿಲ್ ದೇವ್ ಸಿಂಗ್ ನತೃತ್ವದ ಕಮಿಟಿ ನೀಡಿದ ವರದಿ ಆಧಾರದ ಮೇಲೆ ಸರ್ಕಾರ ನೋಟಿಸ್ ನೀಡಿದೆ.

ಈ ಹಿಂದಿನ ಸರ್ಕಾರಗಳ ಬೆಂಬಲ ಪಡೆದು ವಿದ್ಯಾರ್ಥಿಗಳನ್ನ ಖಾಸಗಿ ಶಾಲೆಗಳು ಸುಲಿಗೆ ಮಾಡಿವೆ. ಆದರೆ, ನಮ್ಮ ಸರ್ಕಾರದಲ್ಲಿ ಅದಕ್ಕೆ ಅವಕಾಶವಿಲ್ಲ. ಕೆಲ ಶಾಲೆಗಳು ಒಳ್ಳೆಯ ಆಡಳಿತ ವ್ಯವಸ್ಥೆ ಹೊಂದಿವೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಿಎಸ್‌ವೈ ಅಕ್ರಮ ಡಿನೋಟಿಫಿಕೇಶನ್ ಮಾಡಿಲ್ಲ: ಬಿಜೆಪಿ