Publish Date: Mon, 07 Nov 2022 (10:47 IST)
Updated Date: Mon, 07 Nov 2022 (08:49 IST)
ವಿಧಾನಸಭಾ ಚುನಾವಣೆಗೆ ಎಲ್ಲಾ ಪಕ್ಷಗಳು ರಣತಂತ್ರ ರೂಪಿಸುತ್ತಿದ್ದು, ಬಿಜೆಪಿಯಂತೂ ಹೇಗಾದ್ರೂ ಮಾಡಿ ಅಧಿಕಾರ ಉಳಿಸಿಕೊಳ್ಳಬೇಕು ಎಂದು ನಾನಾ ತಂತ್ರ ಮಾಡುತ್ತಿದೆ.
ಗೆಲ್ಲುವ ಅಭ್ಯರ್ಥಿಗಳ ಶೋಧಕ್ಕಾಗಿ ಡಿಸೆಂಬರ್ ಮೊದಲ ವಾರದವರೆಗೂ ಮೊದಲ ಹಂತದ ಟಿಕೆಟ್ ಸರ್ವೇಯನ್ನು ಬಿಜೆಪಿ ನಡೆಸಲಿದೆ. ಎಲೆಕ್ಷನ್ ಒಳಗೆ ಒಟ್ಟು ಮೂರು ಸಮೀಕ್ಷೆಗಳನ್ನು ನಡೆಸಿ ಬಳಿಕ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಅಂತಿಮ ಮಾಡಲಿದೆ.
ಸದ್ಯ ಗುಜರಾತ್ ಎಲೆಕ್ಷನ್ ಬಗ್ಗೆ ತಲೆ ಕೆಡಿಸಿಕೊಂಡಿರುವ ಬಿಜೆಪಿ ಹೈಕಮಾಂಡ್ ಅಲ್ಲಿನ ಫಲಿತಾಂಶ ಹೊರಬಿದ್ದ ನಂತರ ಕರ್ನಾಟಕದ ಕಡೆ ತಲೆ ಹಾಕಲಿದೆ. ಕೇಸರಿ ಪಡೆ ಪ್ರಕಾರ ಡಿಸೆಂಬರ್ ಮೂರನೇ ವಾರದಿಂದ ರಾಜ್ಯದಲ್ಲಿ ಅಸಲಿ ರಾಜಕೀಯದಾಟ ಶುರುವಾಗಲಿದೆ.