Publish Date: Wed, 12 Oct 2022 (13:13 IST)
Updated Date: Wed, 12 Oct 2022 (12:28 IST)
ನವದೆಹಲಿ : ಭಾರತೀಯ ಐಟಿ ಕ್ಷೇತ್ರಗಳಲ್ಲಿ ಪ್ರಮುಖವಾದ ಇನ್ಫೋಸಿಸ್ ಕಂಪನಿಯ ಅಧ್ಯಕ್ಷ ರವಿಕುಮಾರ್. ಎಸ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ರವಿ ಕುಮಾರ್ ಅವರು ಐಟಿ ಸೇವೆಗಳ ಕಂಪನಿಯ ಅಧ್ಯಕ್ಷರಾಗಿ, ಎಲ್ಲಾ ಉದ್ಯಮ ವಿಭಾಗಗಳಲ್ಲಿ ಇನ್ಫೋಸಿಸ್ ಗ್ಲೋಬಲ್ ಸರ್ವಿಸಸ್ ಆರ್ಗನೈಸೇಷನ್ ಅನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಕಂಪನಿಗೆ ರವಿ ಕುಮಾರ್.ಎಸ್ ಅವರು ಸಲ್ಲಿಸಿದ ಸೇವೆ ಹಾಗೂ ಕೊಡುಗೆಗಳಿಗೆ ನಿರ್ದೇಶಕರ ಮಂಡಳಿಯು ಮೆಚ್ಚುಗೆ ವ್ಯಕ್ತಪಡಿಸಿದೆ. ರವಿ ಕುಮಾರ್ ಅವರು ಕಂಪನಿಯಿಂದ ನಿರ್ಗಮನವಾಗುತ್ತಿರುವುದಕ್ಕೆ ಕಾರಣವೇನು ಎಂಬುವುದರ ಬಗ್ಗೆ ಯಾವುದೇ ಮಾಹಿತಿಯನ್ನು ಸದ್ಯಕ್ಕೆ ತಿಳಿಸಿಲ್ಲ.