Select Your Language

Notifications

webdunia
webdunia
webdunia
webdunia

ರೇಪ್ ಎಸಗಿದ ಮಾವ, ಪತಿಯ ಸಹೋದರನ ವಿರುದ್ಧ ವಿಚಿತ್ರ ಸೇಡು ತೀರಿಸಿಕೊಂಡ ಮಹಿಳೆ

ರೇಪ್
ಲಕ್ನೋ , ಬುಧವಾರ, 20 ಜುಲೈ 2016 (15:09 IST)
ಕುಟುಂಬದ ಸದಸ್ಯರೇ ತನ್ನ ಮೇಲೆ ಅತ್ಯಾಚಾರವೆಸಗಿರುವುದನ್ನು ಬಹಿರಂಗಪಡಿಸಲು ಮಹಿಳೆಯೊಬ್ಬಳು ವಿಚಿತ್ರವಾದ ಪ್ರತಿಭಟನೆಯನ್ನು ಹಮ್ಮಿಕೊಂಡು ಆರೋಪಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.  
ಉತ್ತರಪ್ರದೇಶದ ರಾಜಧಾನಿ ಲಕ್ನೋದಿಂದ 90 ಕಿ.ಮೀ ದೂರದಲ್ಲಿರುವ ಕಾನ್ಪುರ್‌ನಲ್ಲಿ ಸಪ್ನಾ(ಹೆಸರು ಬದಲಿಸಲಾಗಿದೆ) ಎನ್ನುವ ಮಹಿಳೆ ಪ್ರತಿಭಟನೆಗೆ ಕತ್ತೆಗಳನ್ನು ಬಳಸಿಕೊಂಡು ಕತ್ತೆಗಳ ಕೊರಳಲ್ಲಿ ಬ್ಯಾನರ್‌ ಲಗತ್ತಿಸಿ ತನ್ನ ಮೇಲೆ ಅತ್ಯಾಚಾರವೆಸಗಿರುವವರು ಹೆಸರುಗಳನ್ನು ನೇತು ಹಾಕಿದ್ದಾಳೆ. 
 
ತನ್ನ ಪತಿಯ ಅಂಗಡಿಯ ಮುಂದೆ ಅತ್ಯಾಚಾರವೆಸಗಿರುವ ಆರೋಪಿಗಳ ಹೆಸರುಗಳಿರುವ ಬ್ಯಾನರ್‌ಗಳನ್ನು ಕತ್ತೆಗಳ ಕುತ್ತಿಗೆಗೆ ಹಾಕಿ ತನ್ನ ಪತಿಯ ಅಂಗಡಿಯ ಮುಂದೆ ಪ್ರತಿಭಟನೆ ನಡೆಸಿ, ರಸ್ತೆಯಲ್ಲಿ ಸಾಗುತ್ತಿರುವವರಿಗೆ ತನ್ನ ಮೇಲೆ ನಡೆದ ಘಟನೆಯ ವಿವರವಿರುವ ಪಾಂಪ್ಲೆಟ್‌ಗಳನ್ನು ಹಂಚಿ ಜಾಗೃತೆ ಮೂಡಿಸುತ್ತಿದ್ದಾಳೆ.
 
ಕತ್ತೆಗಳ ಕೊರಳಿಗೆ ಬ್ಯಾನರ್ ಹಾಕಿ ಬರೆದ ಅತ್ಯಾಚಾರಿಗಳ ಪಟ್ಟಿಯಲ್ಲಿ ಆಕೆಯ ಮಾವ ಮತ್ತು ಪತಿಯ ಹಿರಿಯ ಸಹೋದರ ಕೂಡಾ ಸೇರಿದ್ದಾನೆ. 
 
ಕಳೆದ ಒಂದು ವರ್ಷದ ಹಿಂದೆ ವಿವಾಹವಾದ ಸಪ್ನಾ ಮಾತನಾಡಿ, ವಿವಾಹವಾದ ಕೆಲ ತಿಂಗಳುಗಳ ನಂತರ ಪಟ್ಟಣದಲ್ಲಿ ಅಂಗಡಿ ವಹಿವಾಟು ನಡೆಸುತ್ತಿರುವ ಪತಿ, ತನ್ನ ತಂದೆ ಮತ್ತು ಸಹೋದರನೊಂದಿಗೆ ಒತ್ತಾಯಪೂರ್ವಕವಾಗಿ ಸೆಕ್ಸ್ ನಡೆಸುವಂತೆ ಒತ್ತಡ ಹೇರಿದ್ದ. ನಂತರ ಕೆಲವು ತಿಂಗಳುಗಳವರೆಗೆ ಮಾವ ಮತ್ತು ನನ್ನ ಪತಿಯ ಸಹೋದರ ನನ್ನ ಮೇಲೆ ನಿರಂತರ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿದ್ದಾಳೆ.   
 
ಆರೋಪಿಗಳ ವಿರುದ್ಧ ಸಪ್ನಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಹಿನ್ನೆಲೆಯಲ್ಲಿ, ಪೊಲೀಸರು ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು.ಆದರೆ, ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದು, ಜೀವ ಬೆದರಿಕೆಯೊಡ್ಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾಳೆ. 
 
ಆರೋಪಿಗಳು ಜೀವ ಬೆದರಿಕೆಯೊಡ್ಡುತ್ತಿರುವ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ವಿನೂತನ ಪ್ರತಿಭಟನೆ ಹಮ್ಮಿಕೊಂಡಿದ್ದೇನೆ ಎಂದು ಸಪ್ನಾ ತಿಳಿಸಿದ್ದಾರೆ.
 
ಇಂತಹ ಗೋಮುಖ ವ್ಯಾಘ್ರಗಳ ಹೀನ ಕೃತ್ಯವನ್ನು ಸಾರ್ವಜನಿಕರ ಎದುರು ಬಹಿರಂಗಪಡಿಸಬೇಕು. ಆರೋಪಿಗಳಿಗೆ ಕಾನೂನಿನಿಂದ ಶಿಕ್ಷೆಯಾಗಬೇಕು ಮತ್ತು ಸಮಾಜದಿಂದ ಕೂಡಾ ಬಹಿಷ್ಕಾರವಾಗಬೇಕು. ಅಂದಾಗ ಮಾತ್ರ ಆರೋಪಿಗಳು ಹೆದರುತ್ತಾರೆ ಎಂದು ಅತ್ಯಾಚಾರಪೀಡಿತ ಮಹಿಳೆ ತಿಳಿಸಿದ್ದಾಳೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಗುಜರಾತ್‌ ರಾಜ್ಯಾದ್ಯಂತ ದಲಿತರ ಭಾರಿ ಪ್ರತಿಭಟನೆ: ಪೊಲೀಸ್ ಪೇದೆಯ ಹತ್ಯೆ