Select Your Language

Notifications

webdunia
webdunia
webdunia
webdunia

ಭಕ್ತೆ ಮೇಲೆ ಅತ್ಯಾಚಾರ! ವೈರಾಗ್ಯಾನಂದ ಅರೆಸ್ಟ್

ಭಕ್ತೆ ಮೇಲೆ ಅತ್ಯಾಚಾರ! ವೈರಾಗ್ಯಾನಂದ ಅರೆಸ್ಟ್
ಭೋಪಾಲ್ , ಬುಧವಾರ, 10 ಆಗಸ್ಟ್ 2022 (09:02 IST)
ಭೋಪಾಲ್ : ಮಧ್ಯಪ್ರದೇಶದ ರಾಜಧಾನಿಯಲ್ಲಿ ಮಹಿಳಾ ಭಕ್ತೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಸ್ವಯಂಘೋಷಿತ ದೇವಮಾನವ ಸ್ವಾಮಿ ವೈರಾಗ್ಯಾನಂದ ಗಿರಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರ) ಅಡಿಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಾಮಿ ವೈರಾಗ್ಯಾನಂದ ಗಿರಿ ಅವರನ್ನು ಗ್ವಾಲಿಯರ್ನಲ್ಲಿ ಬಂಧಿಸಿದ್ದು, ಅವರನ್ನು ಭೋಪಾಲ್ಗೆ ಕರೆತರಲಾಗುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ (ಎಸಿಪಿ) ರಿಚಾ ಚೌಬೆ ತಿಳಿಸಿದ್ದಾರೆ. 

ಜುಲೈ 17 ರಂದು ಆರೋಪಿ ದೇವಮಾನವ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸೋಮವಾರ ಭಕ್ತೆ ದೂರು ನೀಡಿ ನೀಡಿದ್ದಾರೆ.

ಮದುವೆಯಾಗಿ ಬಹಳ ದಿನಗಳಿಂದ ಮಕ್ಕಳಾಗಿರಲಿಲ್ಲ. ಕೆಲವು ವಿಧಿವಿಧಾನಗಳ ಮೂಲಕ ಗರ್ಭಿಣಿಯಾಗುವುದಾಗಿ ಭರವಸೆ ನೀಡಿದ್ದರು. ಹೀಗಾಗಿ ವೈರಾಗ್ಯಾನಂದರ ಆಶೀರ್ವಾದ ಪಡೆಯಲು ಹೋಗಿದ್ದೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. 

ವೈರಾಗ್ಯಾನಂದ ನೀಡಿದ ನೈವೇದ್ಯವನ್ನು ಸೇವಿಸಿ ಮೂರ್ಛೆ ಹೋದಾಗ ದೇವಮಾನವ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ. ಸಾಮಾಜಿಕ ಕಳಂಕದ ಭಯದಿಂದ ತಕ್ಷಣ ದೂರು ನೀಡಲು ಸಾಧ್ಯವಾಗಲಿಲ್ಲ ಎಂದು ಸಂತ್ರಸ್ತೆ ಹೇಳಿಕೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟಿಕೆಟ್ ಬುಕ್ ಆಗಿದ್ದರೆ ಮಾತ್ರ ತಿರುಪತಿ ದರ್ಶನ!