ನಿದ್ರೆ ಬರುವ ಮಾತ್ರೆ ನೀಡಿ ಚಲಿಸುವ ಕಾರಿನಲ್ಲಿ ಮಹಿಳೆ ಮೇಲೆ ಅತ್ಯಾಚಾರ; ರಸ್ತೆಬದಿ ಎಸೆದ ಕಿರಾತಕರು

Webdunia
ಭಾನುವಾರ, 12 ಸೆಪ್ಟಂಬರ್ 2021 (09:33 IST)
Tamil Nadu : ಎರಡು ದಿನಗಳ ಹಿಂದೆ ತಮಿಳುನಾಡಿನ ಚೆನ್ನೈ ಸಮೀಪದ ಕಾಂಚೀಪುರಂ ನಗರದಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ  20 ವರ್ಷದ ಮಹಿಳೆ ಸಾಮೂಹಿಕ ಅತ್ಯಾಚಾರ ನಡೆದಿದ್ದು. ಆ ಮಹಿಳೆಗೆ ಮಾದಕ ದ್ರವ್ಯವನ್ನು ಬಲವಂತವಾಗಿ ಸೇವನೆ ಮಾಡಿಸಿ,  ಐದು ಜನ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

ಮೊಬೈಲ್ ಫೋನ್ ಅಂಗಡಿಯ ಉದ್ಯೋಗಿಯಾಗಿರುವ ಮಹಿಳೆಯ ಮೇಲೆ ಈ ಘೋರ ಅಪರಾಧದ ಎಸಗಿದ ನಂತರ ರಸ್ತೆ ಬದಿ ಎಸೆಯಲಾಯಿತು. ಪೊಲೀಸರು ವಿಶೇಷ ತಂಡಗಳನ್ನು ರಚಿಸಿ ಎಲ್ಲ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಹೇಳಲಾಗಿದೆ.
ಬದುಕುಳಿದ ಈ ಮಹಿಳೆಗೆ ಚಿಕಿತ್ಸೆ ನೀಡುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.
ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯು ಗುಣಶೀಲನ್ ಎಂಬ ಪರಿಚಯಸ್ಥರನ್ನು ಭೇಟಿಯಾಗಲು ತೆರಳಿದ್ದರು, ಪೊಲೀಸ್ ಮೂಲಗಳ ಪ್ರಕಾರ, ಆಕೆಗೆ ನಿದ್ರೆ ಬರುವ ಮಾತ್ರೆಗಳನ್ನು ಹಾಕಿದ ತಂಪು ಪಾನೀಯವನ್ನು ನೀಡಿ ಮತ್ತು ಬರುವಂತೆ ಮಾಡಿ, ಅವಳನ್ನು ಪ್ರಜ್ಞಾಹೀನನನ್ನಾಗಿ ಮಾಡಿ. ಇದಾದ ನಂತರ, ಗುಣಶೀಲನ್ ಮತ್ತು ಆತನ ಸ್ನೇಹಿತರು ಚಲಿಸುತ್ತಿರುವ ಕಾರಿನಲ್ಲಿ ಕಾಂಚೀಪುರಂ ನಗರದ ಬಳಿ ರಸ್ತೆಗಳಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದರು ಎಂದು ಪೊಲೀಸರು ಹೇಳಿದ್ದಾರೆ.
ಸ್ವಲ್ಪ ಸಮಯದ ನಂತರ ಸಂತ್ರಸ್ತೆಗೆ ಪ್ರಜ್ಞೆ ಬಂದಾಗ, ಚಲಿಸುತ್ತಿದ್ದ ಕಾರಿನಲ್ಲಿದ್ದ ಎಲ್ಲ ಆರೋಪಿಗಳೊಂದಿಗೆ ತಪ್ಪಿಸಿಕೊಳ್ಳಲು  ಪ್ರಯತ್ನಿಸಿದಳು ಮತ್ತು ರಸ್ತೆಯಲ್ಲಿದ್ದ ಜನರ ಸಹಾಯಕ್ಕಾಗಿ ಕೂಗಿಕೊಂಡಳು. ಶಬ್ದ ಕೇಳಿದ ದಾರಿಹೋಕರು ಆಕೆಗೆ ಸಹಾಯ ಮಾಡಲು ಧಾವಿಸಿದ್ದು, ಜನರು ಬರುತ್ತಿರುವುದನ್ನು ಗಮನಿಸಿದ ಆರೋಪಿಗಳು ಆಕೆಯನ್ನು ರಸ್ತೆ ಬದಿ ಇಳಿಸಿ ಪರಾರಿಯಾಗಿದ್ದಾರೆ.
ಸೆಪ್ಟೆಂಬರ್ 9 ರಂದು ಎಫ್ಐಆರ್ ನಲ್ಲಿ ಹೆಸರಿಸಲಾದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ, ಮತ್ತೊಬ್ಬರನ್ನು ಶುಕ್ರವಾರ ಬಂಧಿಸಲಾಗಿದೆ. ಸಾಮೂಹಿಕ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಸೇರಿದಂತೆ ಐಪಿಸಿ ಸೆಕ್ಷನ್ ಅಡಿಯಲ್ಲಿ ಪೊಲೀಸರು ಪ್ರಕರಣಗಳನ್ನು ದಾಖಲಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಟ ವಿಜಯ್ ಟಿವಿಕೆ ಪಕ್ಷಕ್ಕೆ ಎಐಎಡಿಎಂಕೆ ನಾಯಕ ಸಂಪತ್ ಸೇರ್ಪಡೆ, ಪಕ್ಷದೊಳಗೆ ಭಾರೀ ಬೆಳವಣಿಗೆ

ಹಿಂದೂ ಹೆಣ್ಣುಮಕ್ಕಳಿಗೆ ಜಾಗೃತಿ ಮೂಡಿಸುವುದು ದ್ವೇಷ ಆಗುತ್ತಾ: ಪ್ರಮೋದ್ ಮುತಾಲಿಕ್

ರೋಡ್‌ನಲ್ಲಿ ಬಿಟ್ಟು ಹೋದ ರಾಟ್ ವೀಲರ್ ನಾಯಿಗಳ ದಾಳಿಗೆ ಮಹಿಳೆ ಬಲಿ, ಆಗಿದ್ದೇನು ಗೊತ್ತಾ

ಶಬರಿಮಲೆ ಚಿನ್ನ ಕಳವು ವಿಚಾರ, ಈಗ ಮಾತನಾಡುವುದು ಸರಿಯಲ್ಲ: ಪಿಣರಾಯಿ ವಿಜಯನ್

ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ವಿಚಾರ ವದಂತಿ ಬೇಡ: ಮಧು ಬಂಗಾರಪ್ಪ

ಮುಂದಿನ ಸುದ್ದಿ