Select Your Language

Notifications

webdunia
webdunia
webdunia
webdunia

ಅತ್ಯಾಚಾರ: ಕೇರಳದಲ್ಲಿ ಕಾಂಗ್ರೆಸ್ ಶಾಸಕನ ಬಂಧನ

ಅತ್ಯಾಚಾರ: ಕೇರಳದಲ್ಲಿ ಕಾಂಗ್ರೆಸ್ ಶಾಸಕನ ಬಂಧನ
ತಿರುವನಂತಪುರಂ , ಶನಿವಾರ, 22 ಜುಲೈ 2017 (16:30 IST)
ಮಹಿಳೆಯೊಬ್ಬಳ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಕಾಂಗ್ರೆಸ್ ಶಾಸಕ ಎಂ.ವಿನ್ಸಂಟ್‌ನನ್ನು ಪೊಲೀಸರು ಬಂಧಿಸಿದ್ದಾರೆ.
 
ಕೋವಲಮ್ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನ್ಸೆಂಟ್ ವಿರುದ್ಧ 51 ವರ್ಷದ ಮಹಿಳೆ ದೂರು ನೀಡಿದ ಹಿನ್ನೆಲೆಯಲ್ಲಿ ಶಾಸಕರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
 
ಆರೋಪಿ ಶಾಸಕನ ವಿರುದ್ಧ ಬಲರಾಮಾಪುರಂ ಪೊಲೀಸ್ ಠಾಣೆಯಲ್ಲಿ  ರೇಪ್, ಮಹಿಳೆಯೊಂದಿಗೆ ಅಸಭ್ಯ ವರ್ತನೆ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಶಾಸಕನ ಕೃತ್ಯದಿಂದಾಗಿ ಮಹಿಳೆ  ವಿಫಲ ಆತ್ನಹತ್ಯೆ ಪ್ರಯತ್ನ ನಡೆಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
 
ಮಹಿಳೆಯ ಪತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಶಾಸಕ ವಿನ್ಸೆಂಟ್ ಪದೇ ಪದೇ ತಮ್ಮ ಪತ್ನಿಗೆ ಮೊಬೈಲ್ ಕರೆ ಮಾಡಿ ಅಶ್ಲೀಲ ಪದಗಳನ್ನು ಬಳಸುತ್ತಿದ್ದ ಎನ್ನಲಾಗಿದೆ.
 
ಸುಮಾರು ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆಸಿದ ಪೊಲೀಸ್ ಅಧಿಕಾರಿಗಳು, ಕೋವಲಮ್ ಶಾಸಕ ಎಂ.ವಿನ್ಸೆಂಟ್‌ನನ್ನು  ಬಂಧಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ನಂಬಿದ್ರೆ ಬಿಟ್ರೆ ಬಿಡಿ: ಸಚಿವ ಡಿಕೆಶಿ, ಕುಮಾರಸ್ವಾಮಿ ಹಸ್ತ ಲಾಘವ