Select Your Language

Notifications

webdunia
webdunia
webdunia
webdunia

ನಾಲ್ಕು ಮಕ್ಕಳಾದ ಮೇಲೆ ಪತಿ ವಿರುದ್ಧ ಅತ್ಯಾಚಾರ ಪ್ರಕರಣ

ನಾಲ್ಕು ಮಕ್ಕಳಾದ ಮೇಲೆ ಪತಿ  ವಿರುದ್ಧ  ಅತ್ಯಾಚಾರ ಪ್ರಕರಣ
ಅಹಮದಾಬಾದ್ , ಶನಿವಾರ, 18 ಫೆಬ್ರವರಿ 2017 (09:05 IST)
ನಾಲ್ಕು ಮಕ್ಕಳ ತಾಯಿಯೋರ್ವಳು ಮದುವೆಯಾಗಿ 16 ವರ್ಷಗಳ ಬಳಿಕ ತನ್ನ ಪತಿಯ ವಿರುದ್ಧ ಅತ್ಯಾಚಾರ ಪ್ರಕರಣವನ್ನು ದಾಖಲಿಸಿದ ವಿಲಕ್ಷಣ ಘಟನೆ ಗುಜರಾತಿನಲ್ಲಿ ನಡೆದಿದೆ.

ಅಹಮದಾಬಾದ್ ಜಿಲ್ಲೆಯ ಧನಧುಕಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, 2001ರಲ್ಲಿ 13 ವರ್ಷದ ಬಾಲಕಿ ಆಗಿದ್ದಾಗ ಪತಿ ನನ್ನ ವಿರುದ್ಧ ಅತ್ಯಾಚಾರವೆಸಗಿದ್ದ ಎಂದಾಕೆ ದೂರು ನೀಡಿದ್ದಾಳೆ.
 
ಅತ್ಯಾಚಾರವಾದ ಬಳಿಕ 16 ವರ್ಷ ನಾವಿಬ್ಬರು ಜತೆಗಿದ್ದೆವು. ನಮಗೆ ನಾಲ್ಕು ಜನ ಮಕ್ಕಳು ಜನಿಸಿದರು. ಆದರೆ 2012ರ ಬಳಿಕ ಮನಸ್ತಾಪದಿಂದಾಗಿ ನಾವಿಬ್ಬರು ದೂರವಾಗಿದ್ದೇವೆ ಎಂದಾಕೆ ಪೊಲೀಸರಲ್ಲಿ ಹೇಳಿದ್ದಾಳೆ.
 
ಮಹಿಳೆಯ ದೂರನ್ನು ಆಧರಿಸಿ ಪೊಲೀಸರಿಗ ಆಕೆಯ ಪತಿಯನ್ನು ಬಂಧಿಸಿದ್ದಾರೆ. ಬಂಧಿತ ಪತಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದ. ವಿಚಾರಣೆ ನಡೆಸಿದ ಕೋರ್ಟ್ ಪತ್ನಿಯ ಕಿಶೋರಾವಸ್ಥೆಯಲ್ಲಿ ಅತ್ಯಾಚಾರವೆಸಗಿರುವ ಗಂಭೀರ ಆರೋಪ ಎದುರಿಸುತ್ತಿರುವ ಆತನಿಗೆ ಜಾಮೀನು ನೀಡಲು ನಿರಾಕರಿಸಿದೆ. ಅಪ್ರಾಪ್ತ ಬಾಲಕಿಯ ಜತೆ ಆಕೆಯ ಸಹಮತಿಯೊಂದಿಗೆ ಲೈಂಗಿಕ ಸಂಪರ್ಕ ನಡೆಸಿದರೂ ಅದು ಘೋರ ಅಪರಾಧವೆನಿಸುತ್ತದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.
 
ನನ್ನ ಪತಿ ಅತ್ಯಾಚಾರ ನಡೆಸುತ್ತಿದ್ದಾಗ ನಾನು ಪ್ರತಿರೋಧ ತೋರುತ್ತಿದ್ದೆ. ಆಗೆಲ್ಲ ಆತ ಮನಬಂದಂತೆ ಥಳಿಸುತ್ತಿದ್ದ. ಯಾರಿಗಾದರೂ ಈ ಕುರಿತು ಹೇಳಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದ ಎಂದಾಕೆ ಆರೋಪಿಸಿದ್ದಾಳೆ.
 
ಸದ್ಯ ತವರಲ್ಲಿರುವ ಪೀಡಿಕೆ ಮನೆಗೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾಳೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ಪನ ಜತೆ ಮಲಗು, ಮಜಾ ನೋಡು ಎಂದಳಂತೆ ಪಾಪಿ ಅಮ್ಮ