Select Your Language

Notifications

webdunia
webdunia
webdunia
webdunia

ಅಪ್ಪನ ಜತೆ ಮಲಗು, ಮಜಾ ನೋಡು ಎಂದಳಂತೆ ಪಾಪಿ ಅಮ್ಮ

ಅಪ್ಪನ ಜತೆ ಮಲಗು, ಮಜಾ ನೋಡು ಎಂದಳಂತೆ ಪಾಪಿ ಅಮ್ಮ
ಮುಕ್ತಸರ್ , ಶನಿವಾರ, 18 ಫೆಬ್ರವರಿ 2017 (09:02 IST)
ಜಗತ್ತಿನಲ್ಲಿ ಕೆಟ್ಟ ಮಕ್ಕಳು ಇರಬಹುದು, ಆದರೆ ಕೆಟ್ಟ ತಾಯಿ ಇರಲಾರಳು ಎನ್ನುತ್ತಾರೆ. ಆದರೆ ಇತ್ತೀಚಿಗೆ ಬೆಳಕಿಗೆ ಬರುತ್ತಿರುವ ಕೆಲವು ಘಟನೆಗಳು ಲಕ್ಷಾಂತರ ವರ್ಷಗಳಿಂದ ಚಾಲ್ತಿಯಲ್ಲಿರುವ ಆ ಮಾತನ್ನು ಸುಳ್ಳಾಗಿಸಿದೆ. ಇದಕ್ಕೊಂದು ಉತ್ತಮ ಉದಾಹರಣೆ ಮುಕ್ತಸರ್‌ನಲ್ಲಿ ನಡೆದಿದೆ.

ತಾಯಿಯೋರ್ವಳು ತನ್ನ ಎರಡನೆಯ ಪತಿ ಜತೆ ಮಗಳನ್ನೇ ಮಲಗಿಸಿದ ಹೇಯ ಕೃತ್ಯವಿದು. ನೀನು ಅವನ ಜತೆ ಮಲಗು, ನನ್ನ ಜತೆ ಆತ ಪ್ರತಿದಿನ ದೈಹಿಕ ಸಂಬಂಧ ಬೆಳೆಸುತ್ತಾನೆ. ನೀನು ಒಮ್ಮೆ ಮಜಾ ನೋಡು ಎನ್ನುತ್ತಿದ್ದ ತಾಯಿ ಬಲವಂತವಾಗಿ ಮಗಳನ್ನು ಆಕೆಯ ಮಲತಂದೆ ಜತೆ ಮಲಗಿಸಿದ್ದಾಳೆ. ಪರಿಣಾಮ ಬಾಲಕಿ ಗರ್ಭಿಣಿಯಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಗರ್ಭಪಾತ ಮಾಡಿಸಲಾಗಿದೆ.
 
ಈ ಕುರಿತು ಮಾಹಿತಿ ಪಡೆದ ಪೊಲೀಸರು ಆಸ್ಪತ್ರೆಯ ಮೇಲೆ ದಾಳಿ ಮಾಡಿದಾಗ ಅಪ್ರಾಪ್ತ ಬಾಲಕಿಗೆ ಗರ್ಭಪಾತ ಮಾಡಿಸುತ್ತಿದ್ದ ವೈದ್ಯರು ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಆಗಲೇ ಪುಟ್ಟ ಬಾಲಕಿಯ ಕರುಣಾಜನಕ ಕಥೆ ಬೆಳಕಿಗೆ ಬಂದಿದ್ದು.
 
ಪೀಡಿತಳ ಸಹೋದರಿ ಹೇಳುವ ಪ್ರಕಾರ ಆಕೆಯ ತಂದೆ ಕೆಲ ದಿನಗಳ ಹಿಂದೆ ಸಾವನ್ನಪ್ಪಿದ್ದು, ಬಳಿಕ ತಾಯಿ ಬಾಹಲಾ ಸಿಂಗ್ ಎಂಬಾತನೊಂದಿಗೆ ವಿವಾಹವಾಗಿದ್ದಾಳೆ. ಆತನ ಜತೆ ದೈಹಿಕ ಸಂಪರ್ಕ ನಡೆಸುವಂತೆ ತಾಯಿ ಅಕ್ಕನಿಗೆ ಒತ್ತಡ ಹೇರುತ್ತಿದ್ದಳು. ಆಕೆಯ ಹೇಳಿಕೆಗೆ ಮೇರೆಗೆ ತಾಯಿ ಮತ್ತು ಆಕಯ ಎರಡನೆಯ ಪತಿ ವಿರುದ್ಧ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ಪಳನಿಗೆ ಅಗ್ನಿಪರೀಕ್ಷೆ, ಅಮ್ಮನ ಹೆಸರಲ್ಲಿ ಪನ್ನೀರ್ ಪ್ರತಿತಂತ್ರ