Publish Date: Tue, 16 May 2017 (09:59 IST)
Updated Date: Tue, 16 May 2017 (10:02 IST)
ನವದೆಹಲಿ: ಭಾರತೀಯ ಸೈನಿಕರ ಮೇಲೆ ಪಾಕ್ ಬೆಂಬಲಿತ ಉಗ್ರರ ದಾಳಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಮಾತನಾಡಿರುವ ಗೃಹಸಚಿವ ರಾಜನಾಥ್ ಸಿಂಗ್, ಕೇಂದ್ರ ಸರ್ಕಾರ ಸೈನಿಕರು ತಲೆ ತಗ್ಗಿಸುವಂತೆ ಮಾಡುವುದಿಲ್ಲ. ಬದಲಿಗೆ ಹಠಾತ್ ಪ್ರತ್ಯುತ್ತರ ನೀಡುತ್ತೇವೆ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಭಯೋತ್ಪಾದಕರ ಅಡಗುದಾಣದ ಮೇಲೆ ಮತ್ತೊಮ್ಮೆ ಹೇಳದೇ ಅನಿರೀಕ್ಷಿತ ದಾಳಿ ನಡೆಸುವುದಾಗಿ ಹೇಳಿದ್ದಾರೆ. ನಾವು ಹೇಳಿ ಮಾಡುವುದಿಲ್ಲ, ಮಾಡಿ ತೋರಿಸುತ್ತೇವೆ ಎಂದು ಸಚಿವರು ಹೇಳಿದ್ದಾರೆ.
ಸೈನಿಕರ ಮೇಲೆ ಇಷ್ಟೆಲ್ಲಾ ದಾಳಿಯಾಗುತ್ತಿದ್ದರೂ, ಸರ್ಕಾರ ಕೈಕಟ್ಟಿ ಕುಳಿತಿದೆ ಎಂದು ಭಾವಿಸಬೇಕಿಲ್ಲ. ಸೈನಿಕರು ತಲೆ ತಗ್ಗಿಸಿ ನಿಲ್ಲುವಂತೆ ಪರಿಸ್ಥಿತಿ ತರಲಾರೆವು ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ