Select Your Language

Notifications

webdunia
webdunia
webdunia
webdunia

ನದಿಜೋಡಣೆ ರೈತರ ಪ್ರಸ್ತಾಪಕ್ಕೆ ರಜನಿ ಬೆಂಬಲ: 1 ಕೋಟಿ ರೂ ಮೀಸಲು

ನದಿಜೋಡಣೆ ರೈತರ ಪ್ರಸ್ತಾಪಕ್ಕೆ ರಜನಿ ಬೆಂಬಲ: 1 ಕೋಟಿ ರೂ ಮೀಸಲು
ಚೆನ್ನೈ , ಸೋಮವಾರ, 19 ಜೂನ್ 2017 (11:45 IST)
ಚೆನ್ನೈ:ಇತ್ತೀಚೆಗಷ್ಟೇ ತಮ್ಮ ಅಭಿಮಾನಿಗಳಿಗೆ, ‘ಯುದ್ಧಕ್ಕೆ ಸಿದ್ಧರಾಗಿ’ ಎಂದು ಕರೆ ನೀಡಿದ್ದ ಸೂಪರ್ ಸ್ಟಾರ್ ರಜನಿಕಾಂತ್, ರಾಜಕೀಯಕ್ಕೆ ಪದಾರ್ಪಣೆ ಮಾಡುವ ನಿಟ್ಟಿನಲ್ಲಿ ಕೆಲಸ ಆರಂಭಿಸಿದ್ದಾರೆ. ದಕ್ಷಿಣ ಭಾರತದ ನದಿ ಜೋಡಣೆಗಾಗಿ 1 ಕೋಟಿ ರೂ. ಮೀಸಲಿಟ್ಟಿದ್ದಾರೆ.
 
ಪಿ. ಅಯ್ಯಕನ್ನು ನೇತೃತ್ವದ 16 ರೈತರ ನಿಯೋಗವನ್ನು ಭೇಟಿ ಮಾಡಿದ ರಜನಿಕಾಂತ್, ನದಿಗಳ ಜೋಡಣೆ ಮಾಡಬೇಕೆಂಬ ಅವರ ಮನವಿಯನ್ನು ಬೆಂಬಲಿಸುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೇ ರಜನೀಕಾಂತ್ ನದಿ ಜೋಡಣೆಗಾಗಿ 1 ಕೋಟಿ ರು ಹಣ ನಮಗೆ ನೀಡಲು ಮುಂದಾದರು, ಆದರೇ ಅದನ್ನು ಪಡೆಯುವ ಅರ್ಹ ವ್ಯಕ್ತಿಗಳು ನಾವಲ್ಲ, ಆ ಹಣವನ್ನ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿ ಎಂದು ರಜನಿ ಅವರಲ್ಲಿ ಮನವಿ ಮಾಡಿರುವುದಾಗಿ ಆಯಕಣ್ಣು ಹೇಳಿದ್ದಾರೆ.
 
ಮಹಾನದಿ, ಗೋದಾವರಿ, ಕೃಷ್ಣಾ, ಪಾಲಾರು ಮತ್ತು ಕಾವೇರಿ ನದಿಗಳ ಜೋಡಣೆಯಾಗಬೇಕು ಎಂಬ ರೈತರು ನೀಡಿರುವ ಪ್ರಸ್ತಾವನೆಗೆ ರಜನಿ ಬೆಂಬಲ ಘೋಷಿಸಿದ್ದಾರೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಪ್ರೈಸ್ ಆಗಿ ಪ್ರೀತಿ ನಿವೇದನೆ: ಪತ್ನಿಯನ್ನೇ ಬರ್ಬರವಾಗಿ ಹತ್ಯೆಗೈದ ಪತಿ