Indore Raja Raghuvamshi murder: ವಿಮಾನ ನಿಲ್ದಾಣದಲ್ಲೇ ಆರೋಪಿ ರಾಜ್ ಕುಶ್ವಾಹ್ ಗೆ ಕಪಾಳ ಮೋಕ್ಷ ವಿಡಿಯೋ

Krishnaveni K
ಬುಧವಾರ, 11 ಜೂನ್ 2025 (09:40 IST)
ಇಂಧೋರ್: ದೇಶದಾದ್ಯಂತ ಸದ್ದು ಮಾಡುತ್ತಿರುವ ರಾಜ ರಘುವಂಶಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ರಾಜ್ ಕುಶ್ವಾಹ್ ನನ್ನು ಬಂಧಿಸಿ ಕರೆತರುವಾಗ ಏರ್ ಪೋರ್ಟ್ ನಲ್ಲೇ ವ್ಯಕ್ತಿಯೊಬ್ಬರು ಕಪಾಳ ಮೋಕ್ಷ ಮಾಡಿದ ವಿಡಿಯೋ ವೈರಲ್ ಆಗಿದೆ.

ರಾಜ ರಘುವಂಶಿ ಮತ್ತು ಸೋನಂ ಮದುವೆಯಾಗಿ ಹನಿಮೂನ್ ಗೆಂದು ಮಧ್ಯಪ್ರದೇಶಕ್ಕೆ ಹೋಗಿದ್ದರು. ಈ ವೇಳೆ ಸೋನಂ ಮತ್ತು ಆಕೆಯ ಪ್ರಿಯಕರ ರಾಜ್ ಕುಶ್ವಾಹ ತಮ್ಮ ಗೆಳೆಯರೊಂದಿಗೆ ಸೇರಿಕೊಂಡು ರಘುವಂಶಿಯನ್ನು ಬರ್ಬರವಾಗಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದರು.

ಇದೀಗ ಎಲ್ಲಾ ಆರೋಪಿಗಳನ್ನೂ ಪೊಲೀಸರು ಸೆರೆಹಿಡಿದಿದ್ದಾರೆ. ರಾಜ್ ಕುಶ್ವಾಹ್ ನನ್ನು ವಿಮಾನದ ಮೂಲಕ ಇಂಧೋರ್ ಗೆ ಪೊಲೀಸರು ಕರೆತಂದಿದ್ದಾರೆ. ಏರ್ ಪೋರ್ಟ್ ನಲ್ಲಿ ಆತನ ಮುಖ ಮುಚ್ಚಿಕೊಂಡು ಕೈಗಳನ್ನು ಹಿಡಿದುಕೊಂಡು ಪೊಲೀಸರು ಕರೆತರುತ್ತಿದ್ದರು.

ಈ ವೇಳೆ ಅಲ್ಲಿಯೇ ನೋಡುತ್ತಾ ನಿಂತಿದ್ದ ಹಿರಿಯ ವ್ಯಕ್ತಿಯೊಬ್ಬರು ರಾಜ್ ಕುಶ್ವಾಹ್ ಕೆನ್ನೆಗೆ ಹೊಡೆದಿದ್ದಾರೆ. ಇದರ ನಡುವೆಯೂ ಪೊಲೀಸರು ಆತನನ್ನು ಹಿಡಿದು ಎಳೆದೊಯ್ದಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕಪಾಳ ಮೋಕ್ಷ ಮಾಡಿದ ವ್ಯಕ್ತಿಯನ್ನು ಸಾರ್ವಜನಿಕರು ಅಭಿನಂದಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಶುಭ್ಮನ್ ಗಿಲ್, ಹಾರ್ದಿಕ್ ಪಾಂಡ್ಯ ಆರೋಗ್ಯದ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಸೂರ್ಯಕುಮಾರ್ ಯಾದವ್

ಇಂಡಿಗೋ ವಿಮಾನ ವ್ಯತ್ಯಯದಿಂದ ಕೋಟಿ ಕೋಟಿ ನಷ್ಟ, ಇದುವರೆಗೆ ಮರುಪಾವತಿಯಾದ ಮೊತ್ತವೆಷ್ಟು ಗೊತ್ತಾ

ದಿತ್ವಾ ಚಂಡಮಾರುತಕ್ಕೆ ತತ್ತರಿಸಿರುವ ಶ್ರೀಲಂಕಾದ ಕಡೆ ಹೊರಟ ಭಾರತದ ನಾಲ್ಕು ನೌಕಾಪಡೆ

ದೆಹಲಿ ಸ್ಫೋಟ ಪ್ರಕರಣ, ಎಲ್ಲ ಆರೋಪಿಗಳ ಎನ್‌ಐಎ ಕಸ್ಟಡಿ ವಿಸ್ತರಣೆ

ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದ ಕೆಎನ್ ರಾಜಣ್ಣ ಹೇಳಿಕೆ

ಮುಂದಿನ ಸುದ್ದಿ
Show comments