Webdunia - Bharat's app for daily news and videos

Install App

ರೈಲು ಬರುವ ವೇಳೆಗೆ ಟ್ರ್ಯಾಕ್ ನಲ್ಲೇ ನಿಂತಿದ್ದ ವ್ಯಕ್ತಿ: ಹೀರೋನಂತೆ ಬಂದ ಗಾರ್ಡ್ ಮಾಡಿದ್ದೇನು ನೋಡಿ Video

ಕೃಷ್ಣವೇಣಿ ಕೆ
ಗುರುವಾರ, 9 ಜುಲೈ 2026 (16:47 IST)
Photo Credit: X
ತಮಿಳುನಾಡಿನ ಸಿರ್ಕಾಳಿ (SirKazhi) ಸಮೀಪದ ರೈಲ್ವೆ ಕ್ರಾಸಿಂಗ್‌ನಲ್ಲಿ ಸಮಯಪ್ರಜ್ಞೆ ಮತ್ತು ಅದಮ್ಯ ಸಾಹಸದ ರೋಮಾಂಚನಕಾರಿ ಘಟನೆಯೊಂದು ನಡೆದಿದೆ. ತೀವ್ರ ವೇಗವಾಗಿ ಧಾವಿಸಿ ಬರುತ್ತಿದ್ದ ರೈಲಿಗೆ ಸಿಲುಕಿ ಸಾಯಲಿದ್ದ ವ್ಯಕ್ತಿಯನ್ನು, ಅಲ್ಲಿ ಕರ್ತವ್ಯದಲ್ಲಿದ್ದ ರೈಲ್ವೆ ಗೇಟ್‌ಕೀಪರ್‌ ಒಬ್ಬರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕ್ಷಣಾರ್ಧದಲ್ಲಿ ರಕ್ಷಿಸಿದ್ದಾರೆ.
 
ಸಿರ್ಕಾಳಿ ಸಮೀಪದ ಗೇಟ್ ಬಳಿ ಗೇಟ್ ಹಾಕಿ, ವೇಗದ ರೈಲು ಬರುವುದನ್ನು ಕಾಯಲಾಗುತ್ತಿತ್ತು. ಆದರೆ, ವ್ಯಕ್ತಿಯೊಬ್ಬ ಮುನ್ನೆಚ್ಚರಿಕೆಯನ್ನು ನಿರ್ಲಕ್ಷಿಸಿ ಅಪಾಯಕಾರಿಯಾಗಿ ಹಳಿ ದಾಟಲು ಮುಂದಾಗಿದ್ದನು. ಅದೇ ಸಮಯಕ್ಕೆ ಎಕ್ಸ್‌ಪ್ರೆಸ್ ರೈಲೊಂದು ತೀವ್ರ ವೇಗದಲ್ಲಿ ಅಲ್ಲಿಗೆ ಧಾವಿಸಿ ಬಂದಿದೆ. ಹಳಿ ದಾಟುತ್ತಿದ್ದ ವ್ಯಕ್ತಿಗೆ ರೈಲು ಅತ್ಯಂತ ಸಮೀಪ ಬಂದಿದ್ದು, ಇನ್ನೇನು ಅಪ್ಪಳಿಸಬೇಕು ಎನ್ನುವಷ್ಟರಲ್ಲಿ ಗೇಟ್‌ಕೀಪರ್‌ ಕಣ್ಣಿಮೆಯಿಕ್ಕುವಷ್ಟರಲ್ಲಿ ಅಪಾಯವನ್ನು ಗ್ರಹಿಸಿದ್ದಾರೆ.
 
ಕ್ಷಣವೂ ತಡಮಾಡದ ಗೇಟ್‌ಕೀಪರ್, ಧಾವಿಸಿ ಹೋಗಿ ಆ ವ್ಯಕ್ತಿಯನ್ನು ಹಳಿಯಿಂದ ಆಚೆಗೆ ಎಳೆದಿದ್ದಾರೆ. ಗೇಟ್‌ಕೀಪರ್ ವ್ಯಕ್ತಿಯನ್ನು ಬದಿಗೆ ತಳ್ಳಿದ ಕೇವಲ 2-3 ಸೆಕೆಂಡುಗಳಲ್ಲಿ ರೈಲು ಅದೇ ಹಳಿಯಲ್ಲಿ ಅತಿ ವೇಗವಾಗಿ ಹಾದುಹೋಗಿದೆ. ಗೇಟ್‌ಕೀಪರ್ ತೋರಿದ ಈ ಸಮಯಪ್ರಜ್ಞೆ ಮತ್ತು ಅದ್ಭುತ ಧೈರ್ಯದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಹಾಗೂ ರೈಲ್ವೆ ಅಧಿಕಾರಿಗಳು ಅವರ ಜೀವಪರ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
pic.twitter.com/Z4f9DrvnCO

 

— Rosy (@rose_k01) July 9, 2026

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

13ರಂದು ಕರ್ನಾಟಕ ಬಂದ್ ಮಾಡಿಯೇ ಸಿದ್ದ: ಹೋರಾಟದಿಂದ ಹಿಂದೆ ಸರಿಯೋ ಮಾತೇ ಇಲ್ಲ ಎಂದ ವಾಟಾಳ್

ಕಾವೇರಿ ನೀರು ಹಂಚಿಕೆ ವಿವಾದ: ವಿಜಯ್‌ಗೆ ಮಹತ್ವದ ಪತ್ರ ಬರೆದ ಬಿವೈ ವಿಜಯೇಂದ್ರ

ವರುಣಾರ್ಭಟ ನಡುವೆ ಮುಂದಿನ ನಾಲ್ಕು ದಿನ ಉಡುಪಿಯಲ್ಲಿ ಹೇಗಿರಲಿದೆ ಗೊತ್ತಾ ಹವಾಮಾನ

ಪ್ರತಿಯೊಂದು ವರ್ಗವೂ ಪ್ರಧಾನಿ ಮೋದಿಯೊಂದಿಗಿದೆ ಎಂಬ ನಂಬಿಕೆ: ಪಿಯೂಷ್ ಗೋಯಲ್

ಕರಾವಳಿಯಲ್ಲಿ ಭಾರೀ ಮಳೆ, ನೇತ್ರಾವತಿ ನೀರಿನ ಮಟ್ಟ ಎಷ್ಟು ಏರಿಕೆಯಾಗಿದೆ ಗೊತ್ತಾ

ಮುಂದಿನ ಸುದ್ದಿ
Show comments