Select Your Language

Notifications

webdunia
webdunia
webdunia
webdunia

ಅಮಿರ್ ಖಾನ್ ವಿರುದ್ಧ ಪರಿಕ್ಕರ್ ವಾಗ್ದಾಳಿ: ರಾಹುಲ್ ತಿರುಗೇಟು

Rahul
ನವದೆಹಲಿ , ಸೋಮವಾರ, 1 ಆಗಸ್ಟ್ 2016 (17:24 IST)
ಅಸಹಿಷ್ಣುತೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಾಲಿವುಡ್ ಸೂಪರ್ ಸ್ಟಾರ್ ಅಮಿರ್ ಖಾನ್ ವಿರುದ್ಧ ಕೇಂದ್ರ ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಅವರಿಗೆ ಬಾಲಿವುಡ್ ಸೂಪರ್ ಸ್ಟಾರ್ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ.

ಪರಿಕ್ಕರ್ ಮತ್ತು ಬಿಜೆಪಿ ಸೈದ್ಧಾಂತಿಕ ಗುರು ಆರ್‌ಎಸ್ಎಸ್ ವಿರುದ್ಧ ಹರಿಹಾಯ್ದಿರುವ ರಾಹುಲ್ ಗಾಂಧಿ, ಸಂಘ ಮತ್ತು ಪರೀಕ್ಕರ್ ಪ್ರತಿಯೊಬ್ಬರಿಗೂ ಪಾಠ ಕಲಿಸುವ ಮಾತನ್ನಾಡುತ್ತಾರೆ.  ನಿಮಗಾಗಿ ಇಲ್ಲಿ ಪಾಠವಿದೆ. ದ್ವೇಷವೆಂಬುದು ಹೇಡಿತನಕ್ಕೆ ಮೀಸಲಾಗಿದ್ದು, ಇದು ಎಂದಿಗೂ ಗೆಲ್ಲುವುದಿಲ್ಲ ಎಂದು ಹೇಳಿದ್ದಾರೆ.

ನಿವಾರ ಸಿಯಾಚಿನ್ ಎಂಬ ಪುಸ್ತಕದ ಮರಾಠಿ ಅನುವಾದ ಬಿಡುಗಡೆ ಮಾಡಿ ಮಾತನಾಡುತ್ತಿದ್ದ ಪರಿಕ್ಕರ್, ನಟನೊಬ್ಬ ದೇಶ ಬಿಟ್ಟು ಹೋಗುವುದಾಗಿ ಹೇಳುತ್ತಾರೆ, ಇದು ಉದ್ಧಟತನದ ಹೇಳಿಕೆ. ನನ್ನ ಮನೆ ಕಳಪೆ ಸ್ಥಿತಿಯಲ್ಲಿದ್ದರು, ಚಿಕ್ಕದಾಗಿದ್ದರೂ ನಾನು ನನ್ನ ಮನೆಯನ್ನು ಪ್ರೀತಿಸುತ್ತೇನೆ. ಮನೆ ಎಷ್ಟೇ ಚಿಕ್ಕದಿದ್ದರೂ ಮನೆ ತೊರೆಯುವ ಮಾತನ್ನಾಡದೆ, ಇರುವ ಜಾಗದಲ್ಲೆ ಬಂಗಲೆ ಕಟ್ಟುವ ಕನಸು ಕಾಣಬೇಕು. ಹೀಗೆ ದೇಶದ ವಿರುದ್ಧ ಮಾತನಾಡುವವರಿಗೆ ಜನರೇ ಸರಿಯಾದ ಪಾಠ ಕಲಿಸಬೇಕು ಎಂದು ಹೇಳಿದ್ದರು. ಅಮಿರ್ ಖಾನ್ ಅವರು ಕಳೆದ ನವೆಂಬರ್​ನಲ್ಲಿ ತಿಂಗಳಲ್ಲಿ ದೇಶದಲ್ಲಿ ಅಸಹಿಷ್ಣುತೆ ಇದೆ ಆದ್ದರಿಂದ ಹೆಂಡತಿ ದೇಶ ತೊರೆಯಲು ಸಲಹೆ ನೀಡಿದ್ದಾಳೆ ಎಂದು ಹೇಳಿ ದೇಶದಾದ್ಯಂತ ಖಂಡನೆಗೆ ಒಳಗಾಗಿದ್ದರು.

ತಮ್ಮ ಅಭಿಪ್ರಾಯಕ್ಕೆ ವಿರೋಧ ಪಕ್ಷಗಳಿಂದ ವ್ಯಾಪಕ ಟೀಕೆಗಳು, ಖಂಡನೆ ವ್ಯಕ್ತವಾಗುತ್ತಿದ್ದಂತೆ ನಾನು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ವಿರೋಧಿಸಿಲ್ಲ. ನಿರ್ದಿಷ್ಟ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ಈ ಮಾತುಗಳನ್ನಾಡಿರಲಿಲ್ಲ.  ಆದರೆ ಅಂತಿಮವಾಗಿ ದೇಶವೇ ಸರ್ವೋಚ್ಚ ಎಂದು ಹೇಳಿದ್ದೆ ಎಂದು ಪರಿಕ್ಕರ್ ಸ್ಪಷ್ಟನೆ ನೀಡಿದ್ದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಮುಖ್ಯಮಂತ್ರಿಗಳಿಗೆ ಸರ್ಕಾರಿ ಬಂಗಲೆ ಇಲ್ಲ