Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ‘ನಾಪತ್ತೆ’!

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ‘ನಾಪತ್ತೆ’!
Amethi , ಬುಧವಾರ, 9 ಆಗಸ್ಟ್ 2017 (10:04 IST)
ಅಮೇಠಿ: ಕಾಂಗ್ರೆಸ್ ಉಪಾಧ್ಯಕ್ಷ ಅಮೇಠಿ ಸಂಸದ ರಾಹುಲ್ ಗಾಂಧಿ ನಾಪತ್ತೆಯಾಗಿದ್ದಾರೆ! ಹೀಗಂತ ಅವರ ಸಂಸದೀಯ  ಕ್ಷೇತ್ರ ಅಮೇಠಿಯಲ್ಲಿ ಪೋಸ್ಟರ್  ರಾರಾಜಿಸುತ್ತಿದೆ.

 
ಸಾಮಾನ್ಯವಾಗಿ ಜನರ ಅಹವಾಲು ಕೇಳದ ಶಾಸಕರು, ಸಂಸದರ  ವಿರುದ್ಧ ಜನರು ಪ್ರತಿಭಟನೆ ನಡೆಸುವುದು ಸಾಮಾನ್ಯ. ಇದೇ ರೀತಿ ಸದ್ಯಕ್ಕೆ ಈ ಕಡೆ ತಲೆಯೂ ಹಾಕದ ರಾಹುಲ್ ಗಾಂಧಿ ವಿರುದ್ಧ ಜನರು ಈ ರೀತಿ  ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಕಾಣೆಯಾಗಿದ್ದಾರೆ’ ಎಂದು ಇಲ್ಲಿನ ಬೀದಿಗಳಲ್ಲಿ ಪೋಸ್ಟರ್ ರಾರಾಜಿಸುತ್ತಿದೆ. ಫೆಬ್ರವರಿಯಿಂದ ನಂತರ ರಾಹುಲ್ ಈ ಕಡೆಗೆ ಬಂದಿಲ್ಲ. ಇದರಿಂದಾಗಿ ಅಭಿವೃದ್ಧಿ ಕೆಲಸಗಳು ಅರ್ಧಕ್ಕೆ ನಿಂತಿವೆ ಎಂದು ಪೋಸ್ಟರ್ ನಲ್ಲಿ ಒಕ್ಕಣೆಯಿದೆ.

ಇದಕ್ಕೆ ಕಾಂಗ್ರೆಸ್ ಕಿಡಿ ಕಾರಿದ್ದು, ಇದೆಲ್ಲಾ ಬಿಜೆಪಿ ಮತ್ತು ಆರ್ ಎಸ್ ಎಸ್ ನ ಕಿತಾಪತಿ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಇದನ್ನೂ ಓದಿ.. ತೂಕ ಇಳಿಸಬೇಕೆಂದರೆ ಬೆಳಗೆದ್ದು ನೀವು ಹೀಗೆ ಮಾಡಬೇಕು
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹೈಕಮಾಂಡ್`ನಿಂದ ಡಿ.ಕೆ. ಶಿವಕುಮಾರ್`ಗೆ ಭರ್ಜರಿ ಗಿಫ್ಟ್..?