ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವಿಟರ್ ಖಾತೆ ಇದ್ದಕ್ಕಿದ್ದಂತೆ ಲಾಕ್ ಆಗಿದೆ. ಇದಕ್ಕೆ ಕಾರಣ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ನೀಡಿದ ದೂರು ಎನ್ನಲಾಗಿದೆ.
ದೆಹಲಿಯ ಅಪ್ರಾಪ್ತ ಬಾಲಕಿ ರೇಪ್ ಕೇಸ್ ಬಗ್ಗೆ ರಾಹುಲ್ ಗಾಂಧಿ ಟ್ವೀಟ್ ಒಂದನ್ನು ಮಾಡಿದ್ದರು. ಈ ಟ್ವೀಟ್ ನಲ್ಲಿ ರಾಹುಲ್ ಆ ಬಾಲಕಿಯ ಪೋಷಕರ ಫೋಟೋ ಪ್ರಕಟಿಸಿದ್ದರು. ಇದು ನಿಯಮಗಳ ಉಲ್ಲಂಘನೆಯಾಗಿದೆ.
ಅತ್ಯಾಚಾರ ಸಂತ್ರಸ್ತೆಯ ಪೋಷಕರ ಐಡೆಂಟಿ ರಿವೀಲ್ ಮಾಡುವ ಹಾಗಿಲ್ಲ. ಆದರೆ ರಾಹುಲ್ ಹೀಗೆ ಮಾಡಿದ್ದಕ್ಕೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅವರ ವಿರುದ್ಧ ಟ್ವಿಟರ್ ಗೆ ನೋಟಿಸ್ ನೀಡಿತ್ತು. ಇದರ ಬೆನ್ನಲ್ಲೇ ರಾಹುಲ್ ಟ್ವಿಟರ್ ಖಾತೆ ತಾತ್ಕಾಲಿಕವಾಗಿ ಅಮಾನಾತಾಗಿದೆ ಎನ್ನಲಾಗಿದೆ.