Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ನ ದಶಕದ ಆಳ್ವಿಕೆಯನ್ನೂ ಮೀರಿಸಿದೆ ಬಿಜೆಪಿಯ ನಾಲ್ಕು ವರ್ಷದ ಆಡಳಿತ : ರಾಹುಲ್ ಗಾಂಧಿ ವ್ಯಂಗ್ಯ

ಕಾಂಗ್ರೆಸ್ ನ ದಶಕದ ಆಳ್ವಿಕೆಯನ್ನೂ ಮೀರಿಸಿದೆ ಬಿಜೆಪಿಯ ನಾಲ್ಕು ವರ್ಷದ ಆಡಳಿತ : ರಾಹುಲ್ ಗಾಂಧಿ ವ್ಯಂಗ್ಯ
ನವದೆಹಲಿ , ಮಂಗಳವಾರ, 11 ಸೆಪ್ಟಂಬರ್ 2018 (09:16 IST)
ನವದೆಹಲಿ: ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕಾಂಗ್ರೆಸ್ ನ ದಶಕಗಳ ಕಾಲದ ಆಡಳಿತವನ್ನೂ ಮೀರಿಸಿದೆ ಎಂದು ಕಾಂಗ್ರೆಸ್ ಅಧ‍್ಯಕ್ಷ ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ.

ತೈಲ ಬೆಲೆ ಏರಿಕೆ ವಿರೋಧಿಸಿ ನಿನ್ನೆ ದೇಶದಾದ್ಯಂತ ಭಾರತ್ ಬಂಧ್ ಗೆ ಕರೆ ನೀಡಲಾಗಿತ್ತು. ಪ್ರತಿಭಟನಾ ರ್ಯಾಲಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ ಈ ರೀತಿ ಕೇಂದ್ರದ ವಿರುದ್ಧ ಲೇವಡಿ ಮಾಡಿದ್ದಾರೆ.

‘ದೇಶದಲ್ಲಿ ಧ್ವೇಷ ಭಾವನೆ ಹೆಚ್ಚುತ್ತಿದೆ. ತೈಲ ಬೆಲೆ ಏರಿಕೆಯಾಗುತ್ತಿದೆ. ರೂಪಾಯಿ ಮೌಲ್ಯ ಕುಸಿಯುತ್ತಿದೆ. ದೇಶ ವಿಭಜನೆಯಾಗುತ್ತಿದೆ. ಯುವ ಜನಾಂಗ ಬೇಸತ್ತಿದೆ. ಇದೆಲ್ಲಾ ಬಿಜೆಪಿ ಆಡಳಿತದ ಸಾಧನೆಗಳು’ ಎಂದು ರಾಹುಲ್ ವ್ಯಂಗ್ಯ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಸಮ್ಮಿಶ್ರ ಸರ್ಕಾರಕ್ಕೆ ಜಾರಕಿಹೊಳಿ ಸಹೋದರರ ಬಾಂಬ್!