ಅಮಿತಾಭ್ ಬಚ್ಚನ್, ಐಶ್ವರ್ಯಾ ರೈಗೆ ರಾಹುಲ್ ಗಾಂಧಿ ಟಾಂಗ್

Krishnaveni K
ಸೋಮವಾರ, 19 ಫೆಬ್ರವರಿ 2024 (10:00 IST)
Photo Courtesy: Twitter
ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಮತ್ತು ಐಶ್ವರ್ಯಾ ರೈಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

ಉತ್ತರಪ್ರದೇಶದಲ್ಲಿ ಭಾರತ್ ನ್ಯಾಯ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅಮಿತಾಭ್ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇತ್ತೀಚೆಗೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಬಚ್ಚನ್ ಕುಟುಂಬ ಹೋಗಿದ್ದಕ್ಕೆ ರಾಹುಲ್ ಟಾಂಗ್ ಕೊಟ್ಟಿದ್ದಾರೆ.

‘ರಾಮಮಂದಿರ ಪ್ರಾಣ ಪ್ರತಿಷ್ಠಾನ ಕಾರ್ಯಕ್ರಮ ನೋಡಿದ್ದೀರಾ? ಅಲ್ಲಿ ಯಾರಾದರೂ ಎಸ್ ಸಿ, ಎಸ್ ಟಿ ಅಥವಾ ಒಬಿಸಿ ಮುಖಗಳಿದ್ದರಾ? ಅಮಿತಾಭ್ ಬಚ್ಚನ್, ಐಶ್ವರ್ಯಾ ಬಚ್ಚನ್ ಮತ್ತು ಪ್ರಧಾನಿ ನರೇಂದ್ರ ಮೋದಿಯಂತಹವರು ಉಪಸ್ಥಿತರಿದ್ದರು. ಆದರೆ ನಿಜವಾಗಿಯೂ ದೇಶ ಮುನ್ನಡೆಸುವವರನ್ನು ಕಾಣಲೇ ಇಲ್ಲ. ಈ ವ್ಯಕ್ತಿಗಳು ನಿಮ್ಮಂತಹವರಿಗೆ ದೇಶದಲ್ಲಿ ಅಧಿಕಾರ ಚಲಾಯಿಸಲು ಸಾಧ‍್ಯವೇ ಇಲ್ಲ ಎಂದು ಸಂದೇಶ ನೀಡಿದರು’ ಎಂದು ರಾಹುಲ್ ವಾಗ್ದಾಳಿ ನಡೆಸಿದ್ದಾರೆ.

ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಮತ್ತು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದ್ದರು. ಈ ಕಾರ್ಯಕ್ರಮಕ್ಕೆ ನೂರಾರು ಸೆಲೆಬ್ರಿಟಿಗಳು, ಗಣ‍್ಯರು ಆಗಮಿಸಿದ್ದರು. ಆದರೆ ಈ ಕಾರ್ಯಕ್ರಮಕ್ಕೆ ಆಹ್ವಾನವಿದ್ದರೂ ವಿಪಕ್ಷ ಕಾಂಗ್ರೆಸ್ ನಯವಾಗಿ ಆಹ್ವಾನ ತಿರಸ್ಕರಿಸಿತ್ತು.

ರಾಹುಲ್ ಗಾಂಧಿ ನ್ಯಾಯ್ ಯಾತ್ರಾ ಇದೀಗ ಉತ್ತರ ಪ್ರದೇಶಕ್ಕೆ ತಲುಪಿದ್ದು, ಅಮೇಥಿಯಲ್ಲಿ ರಾಹುಲ್ ಗಾಂಧಿಗೆ ಪ್ರಿಯಾಂಕ ಕೂಡಾ ಸಾಥ್ ನೀಡಲಿದ್ದಾರೆ. ಉತ್ತರ ಪ್ರದೇಶದಲ್ಲಿ ರಾಹುಲ್ ಯಾತ್ರೆಯಲ್ಲಿ ಭಾಗವಹಿಸುವುದಿಲ್ಲ ಎಂದು ಕಾಂಗ್ರೆಸ್ ಮಿತ್ರ ಪಕ್ಷದ ನಾಯಕ ಅಖಿಲೇಶ್ ಯಾದವ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಆರ್ ಎಸ್ಎಸ್ ಗೆ ಡೊನೇಷನ್ ಎಲ್ಲಿಂದ ಎಂದ ಪ್ರಿಯಾಂಕ್ ಖರ್ಗೆ: ರಾಜಕೀಯ ಪಕ್ಷಗಳಿಗೆ ಎಲ್ಲಿಂದ ಎಂದ ಪಬ್ಲಿಕ್

Karnataka Weather: ಮಳೆ ಮುಗಿದೇ ಹೋಯ್ತು ಎಂದುಕೊಳ್ಳಬೇಡಿ, ಈ ಎಚ್ಚರಿಕೆ ಗಮನಿಸಿ

ವಾರ್ನಿಂಗ್ ಕೊಡಲು ಹೋಗಿ ಮಹತ್ವದ ಸುಳಿವು ಬಿಟ್ಟುಕೊಟ್ರಾ ಡಿಕೆ ಶಿವಕುಮಾರ್‌

ಕೊಳದಲ್ಲಿ ಮೀನು ಹಿಡಿಯುತ್ತಿರುವುದನ್ನು ನೋಡಿ ರಾಹುಲ್ ಗಾಂಧಿ ಏನ್ ಮಾಡಿದ್ರು ನೋಡಿ, Video

ಆರ್‌ಎಸ್‌ಎಸ್ ಬಗ್ಗೆ ಮಾತನಾಡದಿದ್ರೆ ಟಿಕೆಟ್ ಸಿಗಲ್ಲ: ಮತ್ತೇ ಪ್ರಿಯಾಂಕ್ ಖರ್ಗೆ ಕಿಡಿ

ಮುಂದಿನ ಸುದ್ದಿ
Show comments