Webdunia - Bharat's app for daily news and videos

Install App

ರೈತರ ಭೇಟಿಯಿಂದ ಪ್ರಧಾನಿ ಬಟ್ಟೆ ಕೊಳೆ: ರಾಹುಲ್ ಗಾಂಧಿ

Webdunia
ಸೋಮವಾರ, 12 ಸೆಪ್ಟಂಬರ್ 2016 (12:25 IST)
ತಮ್ಮ 15 ಲಕ್ಷ ರೂಪಾಯಿಯ ಬಟ್ಟೆ ಕೊಳೆಯಾಗುತ್ತದೆ ಎಂಬ ಆತಂಕದಿಂದ ಪ್ರಧಾನಿ ಮೋದಿ ಅವರು ರೈತರನ್ನು ಭೇಟಿಯಾಗುವುದಿಲ್ಲ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ. 

ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಉತ್ತರಪ್ರದೇಶದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನ್ನಾಡುತ್ತಿದ್ದ ರಾಹುಲ್ ಗಾಂಧಿ ಮತ್ತೆ ಪ್ರಧಾನಿ ಸೂಟ್ ವಿಷಯವನ್ನಿಟ್ಟುಕೊಂಡು ಕುಹಕವಾಡಿದರು. ತನ್ನ ಸೂಟ್ ಕೊಳೆಯಾಗಬಾರೆಂದು ಪ್ರಧಾನಿ ಕೃಷಿಕರನ್ನು ಭೇಟಿಯಾಗುವುದಿಲ್ಲ. ಅಮೇರಿಕಾ ಮತ್ತು ಚೀನಾಕ್ಕೆ ಪ್ರವಾಸ ಕೈಗೊಳ್ಳುವುದನ್ನು ಮಾತ್ರ ಅವರು ಇಷ್ಟಪಡುತ್ತಾರೆ ಎಂದು ಜರಿದಿದ್ದಾರೆ.
 
ಕಳೆದ ವರ್ಷ ಅಮೇರಿಕಾದ ಅಧ್ಯಕ್ಷ ಬರಾಕ್ ಒಬಾಮಾರನ್ನು ಭೇಟಿಯಾಗುವಾಗ ಪ್ರಧಾನಿ ಮೋದಿ ಧರಿಸಿದ್ದ ದುಬಾರಿ ಸೂಟ್ ಬಹಳ ದೊಡ್ಡ ವಿವಾದವನ್ನು ಸೃಷ್ಟಿಸಿತ್ತು. ಸೂರತ್‌ನ ವಜ್ರದ ವ್ಯಾಪಾರಿಯೋರ್ವರು ಇತ್ತೀಚಿಗೆ ಅದನ್ನು 4.31ಕೋಟಿ ರೂಪಾಯಿಗೆ ಖರೀದಿಸಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು. 
 
ಕಳೆದೊಂದು ವಾರದಿಂದ ಕಿಸಾನ್ ಯಾತ್ರೆ, ಚುನಾವಣಾ ಪ್ರಚಾರದಲ್ಲಿ ತೊಡಗಿರುವ ರಾಹುಲ್ ಗಾಂಧಿ  ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಮಾಜವಾದಿ ಪಕ್ಷ ಮತ್ತು ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷದ ವಿರುದ್ಧ ಕೂಡ ಕಿಡಿಕಾರಿದ್ದರು. ಆನೆ( ಬಿಎಸ್‌ಪಿ ಚುನಾವಣಾ ಚಿಹ್ನೆ) ಎಲ್ಲ ಹಣವನ್ನು ತಿಂದುಹಾಕಿದರೆ, ಸೈಕಲ್ ( ಸಮಾಜವಾದಿ ಚುನಾವಣಾ ಚಿಹ್ನೆ) ಪಂಕ್ಚರ್ ಆಗಿ ನಿಂತಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ. 
 
'ಬಿಎಸ್‌ಪಿ ಮತ್ತು ಸಮಾಜವಾದಿ ಪಕ್ಷಗಳೆರಡು ನಿಮಗೆ ವಂಚನೆ ಮಾಡಿದ್ದು, ನೀವೀಗ 'ಕೈ' ಕುರಿತು ಯೋಚಿಸಬೇಕಾದ ಸಮಯ ಬಂದಿದೆ. ಆ ಬಳಿಕ ಪಡಿತರಚೀಟಿ ಮತ್ತು ರೈತರಿಗಾಗಿ ನಾವೇನು ಮಾಡುತ್ತೇವೆ ಎಂದು ನೋಡಿ ', ಎನ್ನುವುದರ ಮೂಲಕ ಅವರು ಮತದಾರರನ್ನು ಓಲೈಸಲು ಪ್ರಯತ್ನಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arecanut price: ಅಡಿಕೆ, ಕಾಳುಮೆಣಸು ಇಂದಿನ ಮಾರುಕಟ್ಟೆ ದರ ಹೇಗಿದೆ

Gold Price: ಚಿನ್ನ ಖರೀದಿದಾರರಿಗೆ ಇಂದು ಮತ್ತೆ ಶಾಕ್

ಮೊದಲು ಕೇಂದ್ರದಲ್ಲಿ ಅಧಿಕಾರ ಬನ್ನಿ, ಆಮೇಲೆ ಆರ್ ಎಸ್ಎಸ್ ಮಾಡುವಿರಂತೆ: ಪ್ರಿಯಾಂಕ್ ಖರ್ಗೆ ಟ್ರೋಲ್

ಡಾ ಮಂಜುನಾಥ್ ಪ್ರಕಾರ ಹೃದಯಾಘಾತಕ್ಕೆ ಇದೇ ಕಾರಣಗಳು: ಇದನ್ನು ಪಾಲಿಸಿದ್ರೆ ಸಾಕು

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಗ್ನಿ ಅನಾಹುತ: ಜೀವ ಕಾಪಾಡಿದ ಡ್ಯೂಟಿ ಡಾಕ್ಟರ್

ಮುಂದಿನ ಸುದ್ದಿ
Show comments