Webdunia - Bharat's app for daily news and videos

Install App

ತಾಯಿ, ಪತ್ನಿ, ಪುತ್ರಿಯರನ್ನು ಕೊಚ್ಚಿ ಕೊಂದು ಪೊಲೀಸ್ ಠಾಣೆಗೆ ಬಂದ

Webdunia
ಸೋಮವಾರ, 12 ಸೆಪ್ಟಂಬರ್ 2016 (11:53 IST)
ವ್ಯಕ್ತಿಯೋರ್ವ ತನ್ನ ತಾಯಿ, ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಕೊಚ್ಚಿ ಕೊಂದ ಕರಾಳ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜಾಟ್ ತಾಲೂಕಿನ ಕಡ್ನೂರ್ ಗ್ರಾಮದಲ್ಲಿ ಶನಿವಾರ ಮುಂಜಾನೆ ನಡೆದಿದೆ. ಘಟನೆ ಸುಮಾರು 500 ಮನೆಗಳಿರುವ ಪುಟ್ಟ ಹಳ್ಳಿಯನ್ನು ಬೆಚ್ಚಿ ಬೀಳಿಸಿದೆ. 

 
ಆರೋಪಿಯನ್ನು 45 ವರ್ಷದ ಭರತ್ ಇರ್ಕಾರ್ ಎಂದು ಗುರುತಿಸಲಾಗಿದ್ದು, ಆತ ತನ್ನ ತಾಯಿ ಸುಶೀಲಾ, ಪತ್ನಿ ಸಿಂಧೂಬಾಯಿ ಮತ್ತು ಮಕ್ಕಳಾದ ರೂಪಾಲಿ ಮತ್ತು ರಾಣಿಯನ್ನು ಕತ್ತರಿಸಿ ಹಾಕಿದ್ದಾನೆ.
 
ಕೃತ್ಯಕ್ಕೆ ಕಾರಣವೇನೆಂದು ತಿಳಿದು ಬಂದಿಲ್ಲ. ವೃತ್ತಿಯಲ್ಲಿ ರೈತನಾಗಿರುವ ಭರತ್ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಕೃತ್ಯವನ್ನೆಸಗಿರಬಹುದೆಂದು ಶಂಕಿಸಲಾಗಿದೆ.
 
ಶನಿವಾರ ಮುಂಜಾನೆ ಭರತ್ ಪತ್ನಿ ಜತೆ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಏಕಾಏಕಿ ಜಗಳ ಆರಂಭವಾಗಿದೆ. ಕೋಪದ ಭರದಲ್ಲಾತ ಹರಿತವಾದ ಆಯುಧದಿಂದ ಆಕೆಯನ್ನು ಹತ್ಯೆಗೈದಿದ್ದಾನೆ. ಬಳಿಕ ತನ್ನ ತಾಯಿ ಮತ್ತು ಮಕ್ಕಳನ್ನು ಅಲ್ಲಿಗೆ ಕರೆ ತಂದ ಆತ ಮನಬಂದಂತೆ ಕತ್ತರಿಸಿ ಹಾಕಿದ್ದಾನೆ. ಬಳಿಕ ಜಾಟ್ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಆತನ ಬಾಯಿಂದ ಬೀಭತ್ಸ ಕಥೆ ಕೇಳಿ ಪೊಲೀಸರು ಸಹ ಬೆಚ್ಚಿ ಬಿದ್ದಿದ್ದಾರೆ.
 
ಭರತ್ ಹಿರಿಯ ಮಗಳು ರೂಪಾಲಿ ವಾಣಿಜ್ಯ ವಿಷಯದಲ್ಲಿ ಪದವಿ, ಕಿರಿಯವಳು 11 ನೇ ತರಗತಿಯನ್ನು ಓದುತ್ತಿದ್ದಳು. ಆತನಿಗೆ ಮತ್ತಿಬ್ಬರು ಗಂಡು ಮಕ್ಕಳಿದ್ದು ಗಣೇಶ ವಿಸರ್ಜನೆ ಉತ್ಸವದಲ್ಲಿ ಪಾಲ್ಗೊಳ್ಳಲು ಶುಕ್ರವಾರ ರಾತ್ರಿ ಅವರು ಹೊರಗೆ ಹೋಗಿದ್ದರು. ಘಟನೆ ನಡೆದಾಗ ಅವರು ಮನೆಯಲ್ಲಿರಲಿಲ್ಲವೆಂದು ತಿಳಿದು ಬಂದಿದೆ. 
 
ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಘಟನೆಗೆ ನಿಜವಾದ ಕಾರಣವನ್ನು ತಿಳಿಯಲು ಪ್ರಯತ್ನಿಸುತ್ತಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಏರ್‌ ಇಂಡಿಯಾ ವಿಮಾನ ದುರಂತ: ವಾರದೊಳಗೆ ಪ್ರಾಥಮಿಕ ವರದಿ ಹೊರಬೀಳುವ ಸಾಧ್ಯತೆ

ತಮ್ಮ ವಶದಲ್ಲಿರುವ ಕೈದಿಗಳು, ಮೀನುಗಾರರ ಪಟ್ಟಿ ವಿನಿಮಯ ಮಾಡಿಕೊಂಡ ಭಾರತ, ಪಾಕಿಸ್ತಾನ

ಯಾವ ಚಾನೆಲ್ ಗಳು ನನ್ನ ಬಗ್ಗೆ ಸುಳ್ಳು ಸುದ್ದಿ ಹಾಕಿದ್ರೂ ಕೇಳೋನಲ್ಲ ನಾನು: ಸಿದ್ದರಾಮಯ್ಯ

ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕವಾದ ಎನ್ ರಾಮಚಂದರ್ ರಾವ್ ಹಿನ್ನೆಲೆ ಹೀಗಿದೆ

ಸರಣಿ ಹೃದಯಾಘಾತಕ್ಕೆ ಕೊವಿಡ್ ಲಸಿಕೆ ಕಾರಣವಾ: ಸಿದ್ದರಾಮಯ್ಯ ಸ್ಪೋಟಕ ಹೇಳಿಕೆ

ಮುಂದಿನ ಸುದ್ದಿ
Show comments