ನವದೆಹಲಿ: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಪಾಡ್ ಕಾಸ್ಟ್ ಒಂದರಲ್ಲಿ ಮಾತನಾಡುವ ಎಡವಟ್ಟು ಮಾಡಿಕೊಂಡಿದ್ದಾರೆ. ಮಹಾತ್ಮಾ ಗಾಂಧೀಜಿಯವರನ್ನು ದಕ್ಷಿಣ ಆಫ್ರಿಕಾ ಬದಲು ಇಂಗ್ಲೆಂಡ್ ನಲ್ಲಿ ರೈಲಿನಿಂದ ಇಳಿಸಲಾಯಿತು ಎಂದಿದ್ದು ಬಿಜೆಪಿ ಟ್ರೋಲ್ ಮಾಡಿದೆ.
ಸಂದೀಪ್ ದೀಕ್ಷಿತ್ ಅವರೊಂದಿಗಿನ ಪಾಡ್ ಕಾಸ್ಟ್ ನಲ್ಲಿ ರಾಹುಲ್ ಗಾಂಧಿ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮ ಮುತ್ತಜ್ಜ ಜವಹರಲಾಲ್ ನೆಹರೂ, ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಬಗ್ಗೆ ಮಾತನಾಡಿದ್ದಾರೆ.
ಆದರೆ ಗಾಂಧೀಜಿಯವರ ಬಗ್ಗೆ ಮಾತನಾಡುವಾಗ ಯಡವಟ್ಟು ಮಾಡಿಕೊಂಡಿದ್ದಾರೆ. ಅಸಲಿಗೆ ಗಾಂಧೀಜಿಯವರನ್ನು ಕರಿಯ ಎಂಬ ಕಾರಣಕ್ಕೆ ದಕ್ಷಿಣ ಆಫ್ರಿಕಾದಲ್ಲಿ ರೈಲಿನಿಂದ ಮಧ್ಯದಲ್ಲೇ ಇಳಿಸಲಾಗಿತ್ತು. ಇದಾದ ನಂತರ ಅವರು ವರ್ಣಬೇಧದ ವಿರುದ್ಧ ಹೋರಾಟ ಆರಂಭಿಸಿದರು. ಆದರೆ ರಾಹುಲ್ ಗಾಂಧಿ ಮಾತನಾಡುವಾಗ ಇಂಗ್ಲೆಂಡ್ ಎಂದಿದ್ದಾರೆ.
ಇದನ್ನು ಟ್ವೀಟ್ ಮಾಡಿರುವ ಬಿಜೆಪಿ ನಾಯಕ ಲೆಹರ್ ಸಿಂಗ್, ರಾಹುಲ್ ಗಾಂಧಿ ನೋಡಿ ಯಾರೂ ಇತಿಹಾಸ ಕಲಿಯಬೇಡಿ. ಅವರು ಗಾಂಧೀಜಿ, ತಮ್ಮ ಮುತ್ತಜ್ಜ ನೆಹರೂ ಬಗ್ಗೆಯೇ ತಪ್ಪಾಗಿ ಹೇಳಿದ್ದಾರೆ ಎಂದಿದ್ದಾರೆ.