Webdunia - Bharat's app for daily news and videos

Install App

ಸ್ಮೃತಿ ಇರಾನಿ ಬಗ್ಗೆ ಹೀಗೆಲ್ಲಾ ಕಾಮೆಂಟ್ ಮಾಡಬೇಡಿ: ಅಪರೂಪದ ನಡೆ ಪ್ರದರ್ಶಿಸಿದ ರಾಹುಲ್ ಗಾಂಧಿ

Rahul Gandhi
Krishnaveni K
ಶನಿವಾರ, 13 ಜುಲೈ 2024 (11:13 IST)
ನವದೆಹಲಿ: ಅಮೇಠಿಯಲ್ಲಿ ಈ ಬಾರಿ ಕಾಂಗ್ರೆಸ್ ನ ಕಿಶೋರ್ ಲಾಲ್ ವಿರುದ್ಧ ಸೋತ ಸ್ಮೃತಿ ಇರಾನಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅವಹೇಳನಕಾರೀ ಕಾಮೆಂಟ್ ಮಾಡುವ ಕಾರ್ಯಕರ್ತರಿಗೆ ರಾಹುಲ್ ಗಾಂಧಿ ಹೀಗೆ ಮಾಡದಂತೆ ಕರೆ ಕೊಟ್ಟಿದ್ದಾರೆ.

ರಾಜಕೀಯದಲ್ಲಿ ಪರಸ್ಪರ ಟೀಕೆ ಮಾಡುವುದು ಹೊಸತೇನಲ್ಲ. ಇದಕ್ಕೆ ಮೊದಲು 2019 ರ ಲೋಕಸಭೆ ಚುನಾವಣೆಯಲ್ಲಿ ಅಮೇಠಿಯಲ್ಲಿ ಇದೇ ಸ್ಮೃತಿ ಇರಾನಿ ವಿರುದ್ಧ ರಾಹುಲ್ ಗಾಂಧಿ ಸೋತಾಗ ಸ್ವತಃ ಸ್ಮತಿ ಇರಾನಿಯೇ ಟೀಕಾ ಪ್ರಹಾರ ನಡೆಸಿದ್ದರು. ಗಾಂಧಿ ಕುಟುಂಬದ ಕುಡಿ ಒಬ್ಬ ಸಾಮಾನ್ಯ ಕಾರ್ಯಕರ್ತೆಯ ಕೈಯಲ್ಲಿ ಸೋತರು ಎಂದು ತಮಾಷೆ ಮಾಡಿದ್ದರು.

ಈದ ಅದೇ ಪರಿಸ್ಥಿತಿ ಸ್ಮೃತಿ ಇರಾನಿಗೆ ಎದುರಾಗಿದೆ. ಈಗ ಸ್ಮೃತಿ ಇರಾನಿಗೆ ತಿರುಗೇಟು ನೀಡುವ ಸರದಿ ಕಾಂಗ್ರೆಸ್ ನವರದ್ದು. ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಸ್ಮೃತಿ ಇರಾನಿ ಬಗ್ಗೆ ಬಾಯಿಗೆ ಬಂದಂತೆ ಅವಹೇಳನ ಮಾಡುತ್ತಿದ್ದಾರೆ. ಇದನ್ನು ಗಮನಿಸಿರುವ ರಾಹುಲ್ ಗಾಂಧಿ ಮನವಿಯೊಂದನ್ನು ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ‘ಸೋಲು ಗೆಲುವು ಜೀವನದಲ್ಲಿ ಸಾಮಾನ್ಯ. ಹಾಗಂತ ಸ್ಮೃತಿ ಇರಾನಿ ಅಥವಾ ಇತರ ಯಾವುದೇ ನಾಯಕರ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಅವಹೇಳನಕಾರೀ ಕಾಮೆಂಟ್ ಮಾಡಬೇಡಿ’ ಎಂದಿದ್ದಾರೆ. ಅವರ ಈ ಕಾಮೆಂಟ್ ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments