ಗುಜರಾತ್‌ನ ಗೋರಕ್ಷಣಾ ಸಮಿತಿ ಸದಸ್ಯರಿಂದ ದೌರ್ಜನ್ಯಕ್ಕೊಳಗಾಗಿದ್ದ ದಲಿತರ ಕುಟುಂಬದ ಮನೆಗಳಿಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಭೇಟಿ ನೀಡಿ ಸಾಂತ್ವನ ಹೇಳಿದರು.
ಗುಜರಾತ್‌ನ ಉನಾ ಪಟ್ಟಣದಲ್ಲಿ ದಲಿತರನ್ನು ಕಟ್ಟಿಹಾಕಿ ಥಳಿಸಲಾಗಿತ್ತು. ಕಂಬಕ್ಕೆ ಕಟ್ಟಿ ಥಳಿಸುತ್ತಿರುವ ವಿಡಿಯೋ ವೈರಲ್ ಆಗಿದ್ದರಿಂದ, ದೇಶಾದ್ಯಂತ ದಲಿತರಲ್ಲಿ ಆಕ್ರೋಶ ಮೂಡಿಸಿದೆ.
ದಲಿತ ಕುಟುಂಬಗಳಿಗೆ ತಮ್ಮಿಂದಾದ ನ್ಯಾಯ ದೊರಕಿಸಿಕೊಡುವುದಾಗಿ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.
ಕಳೆದ ಜುಲೈ 11 ರಂದು ದಲಿತರು ಸತ್ತಗೋವುಗಳನ್ನು ಸಾಗಿಸುತ್ತಿರುವಾಗ ಗೋ ರಕ್ಷಣಾ ದಳದ ಸದಸ್ಯರು ಹಲ್ಲೆ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಶಂಕಿತ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.