Webdunia - Bharat's app for daily news and videos

Install App

ತಮ್ಮ ಹೆಸರು ಹೇಳಿದ ಟಾಂಗ್ ಕೊಡುವ ರಾಹುಲ್ ಗಾಂಧಿಗೇ ಮಗನ ಮದುವೆ ಆಮಂತ್ರಿಸಿದ ಮುಕೇಶ್ ಅಂಬಾನಿ

Krishnaveni K
ಶುಕ್ರವಾರ, 5 ಜುಲೈ 2024 (08:54 IST)
ನವದೆಹಲಿ: ರಾಹುಲ್ ಗಾಂಧಿ ತಮ್ಮ ಭಾಷಣಗಳಲ್ಲಿ ಪ್ರಧಾನಿ ಮೋದಿಗೆ ಟಾಂಗ್ ಕೊಡಲು ಸದಾ ಅಂಬಾನಿ ಹೆಸರೆತ್ತಿ ಕಿಡಿ ಕಾರುತ್ತಲೇ ಇರುತ್ತಾರೆ. ಆದರೆ ಇದೀಗ ಸ್ವತಃ ಮುಕೇಶ್ ಅಂಬಾನಿ ದಂಪತಿ ತಮ್ಮ ಮಗ ಅನಂತ್ ಅಂಬಾನಿ ಮದುವೆಗೆ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಗೆ ಆಹ್ವಾನವಿತ್ತಿದ್ದಾರೆ ಎನ್ನಲಾಗಿದೆ.

ನರೇಂದ್ರ ಮೋದಿ ಅಂಬಾನಿ, ಅದಾನಿಯಂತಹ ಉದ್ಯಮಿಗಳ ಸಾಲ ಮನ್ನಾ ಮಾಡಿದರು. ಈ ಉದ್ಯಮಿಗಳನ್ನು ಬೆಳಸಿದರು ಎಂದೆಲ್ಲಾ ರಾಹುಲ್ ಸದಾ ಟಾಂಗ್ ಕೊಡುತ್ತಲೇ ಇರುತ್ತಾರೆ. ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲೂ ಮುಕೇಶ್ ಅಂಬಾನಿ ಹೆಸರೆತ್ತಿ ಮೋದಿಗೆ ಟಾಂಗ್ ಕೊಟ್ಟಿದ್ದರು.

ವಿಶೇಷವೆಂದರೆ ರಾಜಕೀಯ ಒಂದು ಕಡೆಯಾದರೆ ಅದನ್ನೆಲ್ಲಾ ಮರೆತು ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಜುಲೈ 12 ರಂದು ಮುಂಬೈನ ಜಿಯೋ ಸೆಂಟರ್ ನಲ್ಲಿ ನಡೆಯಲಿರುವ ಮದುವೆಗೆ ಖುದ್ದಾಗಿ ರಾಹುಲ್ ಗಾಂಧಿಗೆ ಆಹ್ವಾನವಿತ್ತಿದ್ದಾರೆ ಎನ್ನಲಾಗಿದೆ. 10 ಜನಪತ್ ರಸ್ತೆಯಲ್ಲಿ ರಾಹುಲ್, ಸೋನಿಯಾ ನಿವಾಸದ ಬಳಿ ಅಂಬಾನಿ ದಂಪತಿ ಇರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಇದೀಗ ಅಂಬಾನಿ ಎಂದರೆ ಸದಾ ಉರಿದುಬೀಳುವ ರಾಹುಲ್ ಗಾಂಧಿ ಈಗ ಅವರ ಮದುವೆಗೆ ಹೋಗಲಿದ್ದಾರೆಯೇ ಅಥವಾ ರಾಜಕೀಯ ಕಾರಣಗಳಿಗೋಸ್ಕರ ದೂರ ಉಳಿಯಲಿದ್ದಾರೆಯೇ ಎಂದು ಕಾದು ನೋಡಬೇಕಿದೆ. ಈಗಾಗಲೇ ಅನಂತ್ ಮದುವೆ ಪೂರ್ವ ಕಾರ್ಯಕ್ರಮಗಳು ಭರ್ಜರಿಯಾಗಿ ನಡೆಯುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

2029 ರಲ್ಲಿ ಕೇಂದ್ರದಲ್ಲಿ ನಾವು ಬಂದಾಗ ಬಿಜೆಪಿಯವರನ್ನು ತಿಹಾರ್ ಜೈಲಿಗೆ ಹಾಕ್ತೀವಿ: ಪ್ರದೀಪ್ ಈಶ್ವರ್

ಸಂವಿಧಾನಕ್ಕೆ ಅಪಚಾರ ಮಾಡಿದ ಪಕ್ಷ ಎಂದರೆ ಕಾಂಗ್ರೆಸ್: ಛಲವಾದಿ ನಾರಾಯಣಸ್ವಾಮಿ

5 ವರ್ಷ ನಾನೇ ಸಿಎಂ ಎಂದ ಸಿದ್ದರಾಮಯ್ಯ: ಲೈಫ್ ಟೈಂ ನಾನೇ ಎನ್ನಿ ಎಂದ ಡಿಕೆಶಿ ಫ್ಯಾನ್ಸ್

ರಾಹುಲ್ ಗಾಂಧಿ ಭೇಟಿಗೆ ಮುನ್ನ ನಾನೇ ಸಿಎಂ ಎಂದು ಘರ್ಜಿಸಿದ ಸಿದ್ದರಾಮಯ್ಯ

ಆ್ಯಪ್ ಮೂಲಕ ಆನ್‌-ಡಿಮ್ಯಾಂಡ್ ಇಂಟ್ರಾಸಿಟಿ ಶಿಪ್ಪಿಂಗ್ ಸೇವೆ ಆರಂಭಿಸಿದ ಡೆಲಿವರಿ

ಮುಂದಿನ ಸುದ್ದಿ
Show comments