Publish Date: Wed, 26 Jun 2024 (12:44 IST)
Updated Date: Wed, 26 Jun 2024 (12:59 IST)
ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕನಾಗಿ ಆಯ್ಕೆಯಾದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಇಂದು ತಮ್ಮ ಡ್ರೆಸ್ ನಿಂದಲೇ ಎಲ್ಲರ ಗಮನ ಸೆಳೆದರು.
ರಾಹುಲ್ ಗಾಂಧಿ ಕಳೆದ ಅನೇಕ ಸಮಯದಿಂದ ಬಿಳಿ ಟಿ ಶರ್ಟ್ ಮತ್ತು ಕಪ್ಪು ಪ್ಯಾಂಟ್ ತೊಟ್ಟುಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣವನ್ನೂ ಕಾಂಗ್ರೆಸ್ ನಾಯಕರು ಹೇಳಿದ್ದರು. ಈ ಹಿಂದೆ ಭಾರತ್ ಝೋಡೋ ಯಾತ್ರೆ ಸಂದರ್ಭದಲ್ಲಿ, ಚುನಾವಣಾ ಪ್ರಚಾರದ ವೇಳೆ ಬಿಳಿ ಟಿ ಶರ್ಟ್ ತೊಟ್ಟುಕೊಂಡಿದ್ದರು.
ಲೋಕಸಭೆ ಕಲಾಪದ ಮೊದಲ ದಿನವೂ ಟಿ ಶರ್ಟ್, ಪ್ಯಾಂಟ್ ಧರಿಸಿಕೊಂಡು ಬಂದಿದ್ದರು. ಆದರೆ ಇಂದು ಅವರು ವಿರೋಧ ಪಕ್ಷದ ನಾಯಕನಾಗಿ ಆಯ್ಕೆಯಾಗಿದ್ದು, ಇಂದಿನ ಕಲಾಪಕ್ಕೆ ಬಿಳಿಯ ಜುಬ್ಬಾ ತೊಟ್ಟುಕೊಂಡು ಬಂದಿದ್ದಾರೆ. ವಿರೋಧ ಪಕ್ಷದ ನಾಯಕನಾಗುತ್ತಿದ್ದಂತೇ ಅವರ ಡ್ರೆಸ್ ಕೋಡ್ ಕೂಡಾ ಬದಲಾಗಿದೆ.
ಈ ಮೊದಲು ರಾಹುಲ್ ಗಾಂಧಿ ಬಿಳಿ ಬಣ್ಣದ ಜುಬ್ಬಾ ಧರಿಸುತ್ತಿದ್ದರು. ಆದರೆ ಬಳಿಕ ಅವರು ಬಿಳಿ ಟಿ ಶರ್ಟ್ ನ್ನು ತೊಡಲು ಆರಂಭಿಸಿದ್ದರು. ಇದಾದ ಬಳಿಕ ಅವರು ಜುಬ್ಬಾ ಧರಿಸಿಯೇ ಇರಲಿಲ್ಲ ಅದರೆ ಈಗ ತಮ್ಮ ಹುದ್ದೆಗೆ ತಕ್ಕಂತೆ ಡ್ರೆಸ್ ಹಾಕಿಕೊಂಡು ಬಂದಿದ್ದಾರೆ.