ನೋಟು ನಿಷೇಧ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಚಳಿಗಾಲದ ಅಧಿವೇಶನದಲ್ಲಿ ಚರ್ಚೆ ನಡೆಸಲಿ ಎಂದು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಸವಾಲ್ ಹಾಕಿದ್ದಾರೆ.
ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಪ್ರಧಾನಿ ಮೋದಿ ಹಾಜರಾಗಿ ನೋಟು ನಿಷೇಧ ಕುರಿತಂತೆ ಯಾಕೆ ವಿವರಣೆ ನೀಡುತ್ತಿಲ್ಲ? ಯಾವ ಕಾರಣಕ್ಕಾಗಿ ಹೆದರುತ್ತಿದ್ದೀರಿ? ಸಂಸತ್ತಿನಲ್ಲಿ ಚರ್ಚೆ ನಡೆಸಿ ನೋಟು ನಿಷೇಧ ಕುರಿತಂತೆ ದೇಶಕ್ಕೆ ಸಂಪೂರ್ಣ ವಿವರಣೆ ನೀಡಿ ಎಂದು ಗುಡುಗಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ನೋಟು ನಿಷೇಧಕ್ಕೆ ಮುಂಚೆ ನಗುತ್ತಿದ್ದರು. ನೋಟು ನಿಷೇಧದ ನಂತರ ಅಳುವ ನಾಟಕವಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಲೋಕಸಭೆಯಲ್ಲಿ ಮಗದೊಂದು ರೀತಿಯಲ್ಲಿ ಭಾವನಾತ್ಮಕ ಮುಖವನ್ನು ತೋರಿಸುತ್ತಾರೋ ಎನ್ನುವುದನ್ನು ಕಾದು ನೋಡಬೇಕಾಗಿದೆ. ಪ್ರಧಾನಿ ಮೋದಿ ಸಂಸತ್ತಿಗೆ ಬಂದು ಚರ್ಚೆ ನಡೆಸಿದಲ್ಲಿ ಎಲ್ಲರ ಅನುಮಾನಗಳು ಪರಿಹಾರವಾಗುತ್ತವೆ ಎಂದು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.