Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿ ಭಲೇ ನಾಟಕಕಾರ; ಸಿದ್ಧಾರ್ಥ್ ನಾಥ್ ಸಿಂಗ್ ಕಿಡಿ

ರಾಹುಲ್ ಗಾಂಧಿ ಭಲೇ ನಾಟಕಕಾರ; ಸಿದ್ಧಾರ್ಥ್ ನಾಥ್ ಸಿಂಗ್ ಕಿಡಿ
ಲಕ್ನೋ , ಗುರುವಾರ, 7 ಅಕ್ಟೋಬರ್ 2021 (11:01 IST)
ಲಕ್ನೋ (ಅ 07) :  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಅನವಶ್ಯಕವಾಗಿ ಲಕ್ನೋ ವಿಮಾನ ನಿಲ್ದಾಣದಲ್ಲಿ ಭಲೇ ನಾಟಕವನ್ನೇ ನಡೆಸಿದ್ದಾರೆ ಎಂದು ಉತ್ತರಪ್ರದೇಶದ ಸಚಿವ ಸಿದ್ದಾರ್ಥ್ ನಾಥ್ ಸಿಂಗ್ ಕಿಡಿಕಾರಿದ್ದಾರೆ.
Photo Courtesy: Google

ಲಖೀಂಪುರ್ ಖೇರಿ ಹಿಂಸಾಚಾರದಲ್ಲಿ ಮೃತಪಟ್ಟ ರೈತರ ಮನೆಗಳಿಗೆ ಭೇಟಿ ನೀಡುವ ಸಲುವಾಗಿ ಸೋಮವಾರವೇ ಪ್ರಿಯಾಂಕಾ ಗಾಂಧಿ ಲಖೀಂಪುರ್ ಖೇರಿಗೆ  ತಲುಪಿದ್ದರು. ಆದರೆ, ಮುನ್ನೆಚ್ಚರಿಕಾ ಕ್ರಮವಾಗಿ ಅವರನ್ನು ಬಂಧಿಸಿ ಗೆಸ್ಟ್ಹೌಸ್ನಲ್ಲಿ ಗೃಹ ಬಂಧನದಲ್ಲಿ ಇಡಲಾಗಿತ್ತು. ಹೀಗಾಗಿ ನಿನ್ನೆ ರಾಹುಲ್ ಗಾಂಧಿ, ಪಂಜಾಬ್ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಮತ್ತು ಛತ್ತೀಸ್ಗಢದ ಸಿಎಂ ಭೂಪೇಶ್ ಬಘೇಲ್ ಉತ್ತರ ಪ್ರದೇಶಕ್ಕೆ ಆಗಮಿಸಿದ್ದರು. ಆದರೆ, ಅವರಿಗೆ ಲಖೀಂಪುರ್ ಕೇರಿ ಪ್ರವೇಶಕ್ಕೆ ಅವಕಾಶ ನೀಡಿರಲಿಲ್ಲ. ಹೀಗಾಗಿ ರಾಹುಲ್ ಗಾಂಧಿ ವಿಮಾನ ನಿಲ್ದಾಣದಲ್ಲೇ ಧರಣಿ ಆರಂಭಿಸಿದ್ದರು. ಈ ವಿಚಾರ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿತ್ತು.
ಆದರೆ, ಈ ಘಟನೆ ಕುರಿತು ನ್ಯೂಸ್ 18 ವ್ಯವಸ್ಥಾಪಕ ಸಂಪಾದಕ ಜಕ್ಕಾ ಜೇಕಬ್ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಸ್ಪಷ್ಟಪಡಿಸಿರುವ ಸಚಿವ ಸಿದ್ದಾರ್ಥ್ ನಾಥ್ ಸಿಂಗ್, "ಕೆಲವೊಬ್ಬರಿಗೆ ಯಾವಾಗಲೂ ಸಾಮಾಜಿಕ ಜಾಲತಾಣದಲ್ಲಿ ತಮ್ಮನ್ನು ಪ್ರದರ್ಶಿಸಿಕೊ ಳ್ಳಲು ಮತ್ತು ರೀಟ್ವೀಟ್ ಮಾಡಲು ಉತ್ಸುಕರಾಗಿರುತ್ತಾರೆ. ಆದರೆ, ಜನರ ಮೇಲೆ ನಿಜವಾದ ಅಕ್ಕರೆ ಇರುವವರು ಅವರ ಕೆಲಸದ ಮೂಲಕ ಅದನ್ನು ಪ್ರದರ್ಶಿಸಬೇಕು. ರಾಹುಲ್ ಗಾಂಧಿ ಕೇವಲ ಪ್ರಚಾರಕ್ಕಾಗಿ ಈ ಕೆಲಸ ಮಾಡುತ್ತಿದ್ದು, ಇದರಿಂದ ಅವರು ಭಲೇ ನಾಟಕಕಾರ ಎಂಬುದು ಸ್ಪಷ್ಟವಾಗಿದೆ.
ಇನ್ನೂ ಭದ್ರತೆ ಕಾರಣಕ್ಕೆ ರಾಹುಲ್ ಗಾಂಧಿ ಮತ್ತು ಇತರೆ ನಾಯಕರನ್ನು ಲಕ್ನೋ ವಿಮಾನ ನಿಲ್ದಾಣದಲ್ಲಿ ತಡೆಯಲಾಗಿತ್ತು. ಏಕೆಂದರೆ ಲಖೀಂಪುರ್ ಖೇರಿಯಲ್ಲಿ ಗಲಭೆ ಆರಂಭವಾದ ಮೊದಲ ದಿನದಿಂದಲೂ ನಾವು ಸ್ಪಷ್ಟವಾಗಿದ್ದೇವೆ. ಆ ಪ್ರದೇಶ ಅತಿಸೂಕ್ಷ್ಮ ವಲಯವಾಗಿದ್ದು, ಸಾಕಷ್ಟು ಕಾಳಜಿ ವಹಿಸಲು ರಾಜ್ಯ ಸರ್ಕಾರ ನಿರ್ಧರಿಸಿತ್ತು. ಗಲಭೆಯನ್ನು ನಿಯಂತ್ರಿಸಲು ರೈತರು ಮತ್ತು ಉತ್ತರಪ್ರದೇಶ ಸರ್ಕಾರ ಒಂದು ಒಪ್ಪಂದಕ್ಕೆ ಮುಂದಾಗುತ್ತಿದೆ. ಆದರೆ, ಇಂತಹ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರು ಈ ಪ್ರದೇಶಕ್ಕೆ ಭೇಟಿ ನೀಡುವುದು ಅನವಶ್ಯಕ ಗೊಂದಲ ಮತ್ತು ಅಶಾಂತಿಗೆ ಕಾರಣವಾಗಬಹುದು. ಇದೇ ಕಾರಣಕ್ಕೆ ರಾಹುಲ್ ಗಾಂಧಿ ಸೇರಿದಂತೆ ಅನೇಕ ನಾಯಕ ಪ್ರವೇಶವನ್ನು ನಿಷೇಧಿಸಲಾಗಿತ್ತು" ಎಂದು ಸಚಿವ ಸಿದ್ದಾರ್ಥ್ ನಾಥ್ ಸಿಂಗ್ ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನಿಂದ ಆರಂಭ ದಸರೆಯ ವೈಭವ