Select Your Language

Notifications

webdunia
webdunia
webdunia
webdunia

ರಾಹುಲ್ ಕಾಂಗ್ರೆಸ್‌ನ್ನು ಅಧಿಕಾರಕ್ಕೆ ಮರಳಿಸಬಲ್ಲರು: ದಿಗ್ವಿಜಯ್ ಸಿಂಗ್

ರಾಹುಲ್ ಕಾಂಗ್ರೆಸ್‌ನ್ನು ಅಧಿಕಾರಕ್ಕೆ ಮರಳಿಸಬಲ್ಲರು: ದಿಗ್ವಿಜಯ್ ಸಿಂಗ್
ನವದೆಹಲಿ , ಸೋಮವಾರ, 6 ಜೂನ್ 2016 (15:47 IST)
ರಾಹುಲ್ ಗಾಂಧಿ ಅವರು ಕಾಂಗ್ರೆಸ್‌ಗೆ ಅಧಿಕಾರವನ್ನು ಮರಳಿ ತಂದುಕೊಡಬಲ್ಲರು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
 
ಪಕ್ಷಕ್ಕೆ "ಹೊಸ ವಿಚಾರಗಳ" ಮತ್ತು "ಪೀಳಿಗೆಯ ಬದಲಾವಣೆ" ಅವಶ್ಯಕತೆ ಇದ್ದು, ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಲು ಅವಶ್ಯಕವಾದ ಕೌಶಲ್ಯವನ್ನು ಹೊಂದಿದ್ದಾರೆ ಎಂದು ಸಿಂಗ್ ಅಭಿಪ್ರಾಯ ಪಟ್ಟಿದ್ದಾರೆ. 
 
ನವದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಸಿಂಗ್, ನಮ್ಮ ಪಕ್ಷ ಆರಂಭದಿಂದಲೂ ಯುವ ಜನರಿಗೆ ಉತ್ತೇಜನ ನೀಡುತ್ತಿದೆ. ದೇಶದ ಜನಸಂಖ್ಯಾ ಪಾರ್ಶ್ವಚಿತ್ರ ಬದಲಾಗಿದೆ. ಭಾರತವೀಗ ಹೆಚ್ಚು ಯುವದೇಶವಾಗಿದೆ.  ಹೀಗಾಗಿ ನಮಗೆ ಹೊಸ ವಿಚಾರಗಳ, ಹೊಸ ನಾಯಕತ್ವದ ಮತ್ತು  ಕಾರ್ಯನಿರ್ವಹಣೆಯ ಹೊಸ ದಾರಿಯ ಅಗತ್ಯವಿದೆ ಎಂದಿದ್ದಾರೆ. 
 
ಆದರೆ, ಅವರು ಅಧ್ಯಕ್ಷರಾಗಿ ಪದಗ್ರಹಣ ಮಾಡುವುದು ಅಂತಿಮವಾಗಿ ಸೋನಿಯಾ ಗಾಂಧಿ ಅವರಿಗೆ ಬಿಟ್ಟ ವಿಚಾರ ಎಂದು ಅವರು ಹೇಳಿದ್ದಾರೆ.
 
ರಾಹುಲ್ ಅವರ ನಾಯಕತ್ವ ಕೌಶಲ್ಯದ ಬಗ್ಗೆ ಕೇಳಲಾಗಿ, ಅಧ್ಯಕ್ಷರಾಗಿ ಪಟ್ಟ ಧರಿಸಿದರೆ ಪಕ್ಷವನ್ನು ನಡೆಸಿಕೊಂಡು ಹೋಗುವ ಸಾಮರ್ಥ್ಯ ಮತ್ತು ಅನುಭವ ಅವರಿಗಿದೆ ಎಂದು ಸಿಂಗ್ ಉತ್ತರಿಸಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯಸಭೆ ಚುನಾವಣೆ ಹಣದ ಆಮಿಷ: ಸಿಬಿಐಗೆ ಒಪ್ಪಿಸಿ ಎಂದ ಜೆಡಿಎಸ್ ಶಾಸಕ