Publish Date: Wed, 20 Apr 2016 (17:27 IST)
Updated Date: Wed, 20 Apr 2016 (19:03 IST)
ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸುದ್ದಿಗೋಷ್ಠಿ ನಡೆಸಿರುವ ಸಿಐಡಿ ತನಿಖೆ ಪ್ರಗತಿ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಸಿಐಡಿ ಡಿಜಿಪಿ ಕಿಶೋರ್ ಚಂದ್ರ ಮತ್ತು ಎಡಿಜಿಪಿ ಪ್ರತಾಪ್ ರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿದ್ದರು.
ಡಿಜಿಪಿ ಕಿಶೋರ್ ಚಂದ್ರ ನೀಡಿರುವ ಮಾಹಿತಿಗಳು ಈ ಮುಂದಿನಂತಿವೆ:
*ಆರೋಪಿಗಳಲ್ಲಿ ಕೆಲವರು ಹತ್ತು ವರ್ಷದಿಂದ ಲೀಕ್ ದಂಧೆಯಲ್ಲಿದ್ದಾರೆ.
*ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 10 ಆರೋಪಿಗಳನ್ನು ಬಂಧಿಸಲಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
* ಪ್ರಕರಣದ ಕಿಂಗ್ ಪಿನ್ ಶಿವಕುಮಾರ್ ತಲೆ ಮರೆಸಿಕೊಂಡಿರುವುರಿಂದ ಆತನನ್ನು ಇದುವರೆಗೂ ಬಂಧಿಸಲಾಗಿಲ್ಲ. ಆತನಿಗಾಗಿ ಶೋಧ ಮುಂದುವರೆದಿದೆ. ಆರೋಪಿಗಳು ಹಲವು ವರ್ಷಗಳಿಂದ ಈ ಕೃತ್ಯದಲ್ಲಿ ತೊಡಗಿದ್ದರು.
*ಆರೋಪಿಗಳಿಗೆ 1 ವರ್ಷ ನಿರೀಕ್ಷಣಾ ಜಾಮೀನು ಸಿಗುವುದಿಲ್ಲ.
*ಆರೋಪಿಗಳ ಸ್ವತ್ತು ಮುಟ್ಟುಗೋಲಿಗೆ ಸರ್ಕಾರಕ್ಕೆ ಅವಕಾಶ
*ವಿಶೇಷ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ
*ಲೀಕ್ ಆರೋಪಿಗಳ ವಿರುದ್ಧ ಕೋಕಾ ಕಾಯಿದೆಯಡಿ ಪ್ರಕರಣ ದಾಖಲು
*ಇದೇ ಮೊದಲ ಬಾರಿಗೆ ಕೋಕಾ ಅಡಿಯಲ್ಲಿ ಕೇಸ್ ದಾಖಲಿಸಿರುವ ಸಿಐಡಿ