Webdunia - Bharat's app for daily news and videos

Install App

ಮತ್ತೆ ಮೂವರಿಗೆ ಭಾರತ ರತ್ನ ಪ್ರಧಾನ: ಆ ಸಾಧಕರು ಯಾರೆಲ್ಲಾ?

Krishnaveni K
ಶುಕ್ರವಾರ, 9 ಫೆಬ್ರವರಿ 2024 (15:14 IST)
Photo Courtesy: Twitter
ನವದೆಹಲಿ: ಭಾರತದ ಇಬ್ಬರು ಮಾಜಿ ಪ್ರಧಾನಿಗಳು ಮತ್ತು ಓರ್ವ ವಿಜ್ಞಾನಿ ಸೇರಿದಂತೆ ಮತ್ತೆ ಮೂವರಿಗೆ ಭಾರತ ರತ್ನ ಪ್ರಧಾನ ಮಾಡುವುದಾಗಿ ಪ್ರಧಾನಿ ಮೋದಿ ಘೋಷಣೆ ಮಾಡಿದ್ದಾರೆ.

ಭಾರತದ ಮಾಜಿ ಪ್ರಧಾನಿಗಳಾದ ಪಿವಿ ನರಸಿಂಹ ರಾವ್, ಚೌಧರಿ ಚರಣ್ ಸಿಂಗ್ ಮತ್ತು ವಿಜ್ಞಾನಿ ಎಂಎಸ್‍ ಸ್ವಾಮಿನಾಥನ್ ಅವರಿಗೆ ಭಾರತ ರತ್ನ ಪ್ರಧಾನ ಮಾಡಲಾಗುತ್ತದೆ. ಇದಕ್ಕೆ ಮೊದಲು ಇತ್ತೀಚೆಗಷ್ಟೇ ಮಾಜಿ ಉಪಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ, ಬಿಹಾರದ ಮಾಜಿ ಸಿಎಂ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ಪ್ರಧಾನ ಮಾಡಲಾಗಿತ್ತು. ಈ ಮೂಲಕ ಒಂದೇ ತಿಂಗಳ ಅವಧಿಯಲ್ಲಿ ಒಟ್ಟು ಐವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಶ್ತಿಯಾದ ಭಾರತ ರತ್ನ ಪ್ರಶಸ್ತಿ ಗೌರವ ಸಲ್ಲಿಸಲಾಗುತ್ತಿದೆ. ಈ ಐವರ ಬಗ್ಗೆ ವಿವರಗಳು ಇಲ್ಲಿವೆ ನೋಡಿ.

ಪಿವಿ ನರಸಿಂಹ ರಾವ್
1991 ರಿಂದ 1996 ರವರೆಗೆ ಭಾರತದ 9 ನೇ ಪ್ರಧಾನ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಅವರ ಕಾಲದಲ್ಲಿ  ಅನೇಕ ಉದಾರೀಕರಣ ಮತ್ತು ಆರ್ಥಿಕ ಸುಧಾರಣಾ ಕ್ರಮಗಳನ್ನು ಜಾರಿಗೆ ತರಲಾಗಿದ್ದು, ಇದು ಇಂದಿಗೂ ಪ್ರಸ್ತುತವಾಗಿದೆ. ನೆರೆಯ ರಾಜ್ಯಗಳೊಂದಿಗೆ ರಾಜತಾಂತ್ರಿಕ ಸಂಬಂಧ ವೃದ್ಧಿ, ಭಾರತದ ಆರ್ಥಿಕ ಪರಿವರ್ತನೆಗೆ ಅವರ ಕೊಡುಗೆ ಅಪಾರ. 2004 ರಲ್ಲಿ ನರಸಿಂಹ ರಾವ್ ನಿಧನ ಹೊಂದಿದ್ದರು.
ಚೌಧರಿ ಚರಣ್ ಸಿಂಗ್
1979 ರಿಂದ 1980 ರವರೆಗೆ ದೇಶದ ಐದನೇ ಪ್ರಧಾನ ಮಂತ್ರಿಯಾಗಿ ಕೆಲಸ ಮಾಡಿದರು. ರೈತರ ಹಕ್ಕುಗಳಿಗಾಗಿ ಹೋರಾಟ ನಡೆಸಿದ ಅಪ್ರತಿಮ ನಾಯಕ. ಹಲವು ಕೃಷಿ ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದರು. ಗ್ರಾಮೀಣ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯಕ್ಕೆ ಹೆಚ್ಚು ಒತ್ತು ನೀಡಿದ್ದರು. ಅವರು 1987 ರಲ್ಲಿ ನಿಧನರಾಗಿದ್ದರು.
ಎಂಎಸ್ ಸ್ವಾಮಿನಾಥನ್
ತಮಿಳುನಾಡು ಮೂಲದ ಸ್ವಾಮಿನಾಥನ್ ಖ್ಯಾತ ಕೃಷಿ ವಿಜ್ಞಾನಿಯಾಗಿದ್ದರು. ಅವರು ಹಸಿರು ಕ್ರಾಂತಿಗೆ ಪ್ರಾಮುಖ್ಯತೆ ನೀಡಿದರು. ಹೆಚ್ಚು ಇಳುವರಿ ಕೊಡುವ ಗೋಧಿ ಬಗ್ಗೆ ಸಂಶೋದನೆ ನಡೆಸಿದ್ದರು. ಅವರ ಸಂಶೋಧನೆಗಳು ಭಾರತದ ಆಹಾರದ ಕೊರತೆಯನ್ನು ನೀಗಿಸುವಲ್ಲಿ ಪ್ರಧಾನ ಪಾತ್ರ ವಹಿಸಿತು. ಅವರ ಆಹಾರ ಭದ್ರತೆ ಮತ್ತು ಕೃಷಿ ಸುಧಾರಣಾ ಕೆಲಸಗಳು ಇಂದಿನ ತಲೆಮಾರಿಗೂ ಪ್ರೇರಣೆಯಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments