Select Your Language

Notifications

webdunia
webdunia
webdunia
webdunia

ನಾಳೆ ಪಂಜಾಬ್- ಗೋವಾದಲ್ಲಿ ಹೈ ವೋಲ್ಟೇಜ್ ಕದನ

ನಾಳೆ ಪಂಜಾಬ್- ಗೋವಾದಲ್ಲಿ ಹೈ ವೋಲ್ಟೇಜ್ ಕದನ
ಚಂಡೀಘಡ, ಪಣಜಿ , ಶುಕ್ರವಾರ, 3 ಫೆಬ್ರವರಿ 2017 (17:13 IST)
ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಪಂಜಾಬ್ ಮತ್ತು ಗೋವಾ ರಾಜ್ಯಗಳ ವಿಧಾನಸಭಾ ಚುನಾವಣೆ ನಾಳೆ ನಡೆಯಲಿದೆ. ನಿನ್ನೆ ಎರಡು ರಾಜ್ಯಗಳಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿತ್ತು.  

 
117 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಪಂಜಾಬ್‌ನಲ್ಲಿ ಕಾಂಗ್ರೆಸ್ ಕ್ಯಾ. ಅಮರಿಂದರ್ ಸಿಂಗ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದೆ. ಬಿಜೆಪಿ ತೊರೆದು ಆಪ್ ಸೇರಿರುವ ಸಿಕ್ಸರ್ ಸಿಧು ವರ್ಚಸ್ಸು, ಮತಗಳನ್ನು ಸಳೆಯಲು ಕೇಜ್ರಿವಾಲ್ ಬಣಕ್ಕೆ ಎಷ್ಟರ ಮಟ್ಟಿಗೆ ಸಫಲವಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
 
ಆಡಳಿತಾರೂಢ ಬಿಜೆಪಿ- ಅಕಾಲಿದಳ  ಮೈತ್ರಿಕೂಟ ಹಾಲಿ ಸಿಎಂ ಪ್ರಕಾಶ್ ಸಿಂಗ್ ಬಾದಲ್ ಅವರನ್ನೇ ಸಿಎಂ ಅಭ್ಯರ್ಥಿ ಎಂದು ಘೋಷಿಸಿ ಅದೃಷ್ಟ ಪರೀಕ್ಷಿಸ ಹೊರಟಿದೆ.
 
'ಕೈ' ಮುರಿದು, 'ಕಮಲ'ವನ್ನು ಕಿತ್ತೊಗೆದು, ದೆಹಲಿಯಂತೆ ಪಂಜಾಬ್‌ನಲ್ಲೂ ಗದ್ದುಗೆ ಏರಲು ಶತಾಯಗತಾಯ ಪ್ರಯತ್ನ ನಡೆಸುತ್ತಿರುವ ಆಪ್ ಭಗವಂತಮಾನ್ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಿದೆ. ಪಂಜಾಬ್ ರಾಜ್ಯದಲ್ಲಿ 1.98 ಮತದಾರರು ಮತದಾರರಿದ್ದು, 1,145 ಅಭ್ಯರ್ಥಿಗಳ ಭವಿಷ್ಯ ನಾಳೆ ಮತಪೆಟ್ಟಿಗೆಯನ್ನು ಸೇರಲಿದೆ. 
 
ಪಂಜಾಬ್‌ನಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದೂ ದೇಶಾದ್ಯಂತ ಕುತೂಹಲಕ್ಕೆ ಕಾರಣವಾಗಿದೆ.
 
ಗೋವಾ ರಾಜ್ಯದ 40 ವಿಧಾನಸಭಾ ಕ್ಷೇತ್ರಗಳಿಗೆ 250 ಅಭ್ಯರ್ಥಿಗಳು ಕಣದಲ್ಲಿದ್ದು, ಅವರಲ್ಲಿ 57 ಮಂದಿ ಅಪರಾಧ ಹಿನ್ನೆಲೆಯುಳ್ಳವರಾಗಿದ್ದಾರೆ.ಕಾಂಗ್ರೆಸ್ 37 , ಎನ್ ಸಿಪಿ 16 ಮತ್ತು ಎಂಜಿಪಿ-ಜಿಎಸ್ಎಮ್-ಶಿವ ಸೇನಾ ಮೈತ್ರಿಕೂಟಗಳು 26 ಮಂದಿ, ಬಿಜೆಪಿ 36, ಆಮ್ ಆದ್ಮಿ ಪಕ್ಷ  39 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. 11 ಲಕ್ಷಕ್ಕೂ ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದು, ರಾಜ್ಯಾದ್ಯಂತ 1,649 ಮತಗಟ್ಟೆಗಳಿವೆ.
 
ಗೋವಾದಲ್ಲಿ ಬಿಜೆಪಿ, ಕಾಂಗ್ರೆಸ್, ಆಮ್ ಆದ್ಮಿ ಪಕ್ಷ, ಎಂಜಿಪಿ ಮತ್ತು ಇತರರ ನಡುವೆ ಬಹುಕೋನ ಸ್ಪರ್ಧೆ ಇದೆ.
 
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹಳೆಯ 500 ಮತ್ತು 1,000 ರೂಪಾಯಿ ನೋಟುಗಳ ನಿಷೇಧ ಮಾಡಿದ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದ್ದು, ಇದು ಬಿಜೆಪಿಗೆ ಅಗ್ನಿ ಪರೀಕ್ಷೆ ಎಂದೇ ಹೇಳಬಹುದು. 
 
ಎರಡು ರಾಜ್ಯಗಳಲ್ಲಿ ಒಂದೇ ಹಂತದ ಚುನಾವಣೆ ನಡೆಯುತ್ತಿದ್ದು, ರಾಜ್ಯಗಳಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ಕೈಗೊಳ್ಳಲಾಗಿದೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ಮಾರನ್ ಖುಲಾಸೆ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಇಡಿ