Select Your Language

Notifications

webdunia
webdunia
webdunia
webdunia

ಬೆಂಗಳೂರಿನಿಂದ ಪುಣೆಯವರೆಗೆ ಹಿಂಬಾಲಿಸಿ ಕೊಂದ?

ಬೆಂಗಳೂರಿನಿಂದ ಪುಣೆಯವರೆಗೆ ಹಿಂಬಾಲಿಸಿ ಕೊಂದ?
ಪುಣೆ , ಸೋಮವಾರ, 26 ಡಿಸೆಂಬರ್ 2016 (14:29 IST)
23 ವರ್ಷದ ಟೆಕ್ಕಿ ಅಂತರಾ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಆರೋಪಿ ಅಂತರಾ ದಾಸ್‌ಳನ್ನು ಅನೇಕ ತಿಂಗಳಿಂದ ಹಿಂಬಾಲಿಸುತ್ತಿದ್ದ ಎಂದು ಆಕೆಯ ತಂದೆ ಪೊಲೀಸ್ ವಿಚಾರಣೆ ಸಂದರ್ಭದಲ್ಲಿ ಹೇಳಿದ್ದಾರೆ. ಮಹಾರಾಷ್ಟ್ರದ ಪುಣೆಯ ಹೊರವಲಯದಲ್ಲಿ ಶುಕ್ರವಾರ ರಾತ್ರಿ 8ಗಂಟೆಗೆ ಅಂತರಾ ಕೊಲೆ ನಡೆದಿತ್ತು.

ಹತ್ಯೆಯಾದ ಯುವತಿ ಅಂತರಾ ದಾಸ್ ಸಾಫ್ಟವೇರ್ ಎಂಜಿನಿಯರ್ ಆಗಿದ್ದು ತತ್ವಾಡೆ ಪ್ರದೇಶದ ಕ್ಯಾಪ್‌ಜಿಮಿನಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಆಫೀಸಿನಿಂದ ಅರ್ಧ ಕೀ.ಮಿ ದೂರದಲ್ಲೇ ಹತ್ಯೆಯಾಗಿದ್ದು ಆಕೆ ಮೂಲತಃ ಪಶ್ಚಿಮ ಬಂಗಾಳದವಳು ಎಂದು ತಿಳಿದು ಬಂದಿದೆ. 
 
ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಅಂತರಾ ಎಂದಿನಂತೆ ಕ್ಯಾಬ್ ಮೇಲೆ ಹೋಗದೇ ನಡೆದುಕೊಂಡೇ ಹೋಗಿದ್ದಳು. ಆ ಸಮಯದಲ್ಲಿ ವ್ಯಕ್ತಿಯೊಬ್ಬ ಹರಿತವಾದ ಆಯುಧವನ್ನು ಹಿಡಿದುಕೊಂಡು ಆಕೆಯನ್ನು ಹಿಂಬಾಲಿಸಿಕೊಂಡು ಬಂದ. ಭಯಗ್ರಸ್ತಳಾದ ಆಕೆ ಆತನಿಂದ ತಪ್ಪಿಸಿಕೊಳ್ಳಲು ಜೋರಾಗಿ ಓಡಿದ್ದಾಳೆ. ಆದರೆ ಹಿಂಬಾಲಿಸಿದ ಆತ ಅಟ್ಟಾಡಿಸಿಕೊಂಡು ಅನೇಕ ಬಾರಿ ಇರಿದು ಆಕೆಯನ್ನು ಕೊಂದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
 
ರಕ್ತದ ಮಡುವಿನಲ್ಲಿ ಬಿದ್ದಿದ್ದ ಐಕೆಯನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು.ಆದರೆ ವೈದ್ಯರು ಆಕೆ ಸಾವನ್ನಪ್ಪಿರುವುದಾಗಿ ಘೋಷಿಸಿದ್ದಾರೆ. 
 
ಈ ದುಷ್ಕೃತ್ಯಕ್ಕೆ ಕಾರಣವೇನೆಂದು ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಆಕೆಯ ಮೈಮೇಲಿದ್ದ ಚಿನ್ನಾಭರಣವನ್ನು ದೋಚಿಲ್ಲವಾದ್ದರಿಂದ ಕೊಲೆಯ ಹಿಂದಿನ ಉದ್ದೇಶ ದರೋಡೆಯಾಗಿರುವುದನ್ನು ಪೊಲೀಸರು ಅಲ್ಲಗಳೆದಿದ್ದಾರೆ. ಪೊಲೀಸರ ಪ್ರಕಾರ ದಾಳಿಕೋರ ಅಂತರಾಳಿಗೆ ಪರಿಚಿತನೇ ಆಗಿರಬೇಕು.
 
ಪ್ರಾಥಮಿಕ ವರದಿಗಳ ಪ್ರಕಾರ ಕೊಲೆಗಾರ ಅಂತರಾ ಬೆಂಗಳೂರಿನಲ್ಲಿ ಓದುತ್ತಿದ್ದಾಗ ಆಕೆಯನ್ನು ಭೇಟಿಯಾಗಿದ್ದ ಮತ್ತು ಆಕೆ ಪುಣೆಗೆ ಕೆಲಸಕ್ಕೆ ಸೇರಿದರೂ ಆಕೆಯನ್ನೇ ಹಿಂಬಾಲಿಸಿದ್ದ.
 
ಮಾಧ್ಯಮದವರೊಂದಿಗೆ ಮಾತನಾಡಿರುವ ಅವರ ತಂದೆ, ತನ್ನ ಮಗಳು ಕೊಲೆಯಾಗುವವರೆಗೂ ಆಕೆಯ ಮೇಲೆ ದೌರ್ಜನ್ಯ ನಡೆಯುತ್ತಿರುವುದು ನನಗೆ ತಿಳಿದು ಬರಲಿಲ್ಲ ಎಂದಿದ್ದಾರೆ.
 
ನನಗೆ ಆಕೆಯ ಸಾವಿನ ಸುದ್ದಿ ಕೇಳಿ ಆಘಾತವಾಯ್ತು. ಆಕೆ ಬುದ್ಧಿವಂತೆ ಮತ್ತು ಧೈರ್ಯಶಾಲಿಯಾಗಿದ್ದಳು. ಆಕೆ ಬೆಂಗಳೂರಿನಲ್ಲಿ ಜಾವಾ ಸ್ಕ್ರಿಪ್ಟ್ ಓದುತ್ತಿದ್ದಾಗ ಯುವಕನೊಬ್ಬ ಆಕೆಯನ್ನು ಕಾಡಿಸುತ್ತಿದ್ದನಂತೆ. ನಿನ್ನೆ ಅಷ್ಟೇ ನನ್ನ ಕಿರಿಯ ಮಗಳಿಂದ ಇದು ನನಗೆ ತಿಳಿದು ಬಂತು ಎನ್ನುತ್ತಾರೆ ಮೃತಳ ತಂದೆ ದೇಬಾನಂದ ದಾಸ್. 
 
ಪ್ರತ್ಯಕ್ಷದರ್ಶಿ ಹೇಳಿರುವ ಪ್ರಕಾರ ಕೊಲೆಗಾರ ನೀಲಿ-ಕಪ್ಪು ಟೀ ಶರ್ಟ್ ಧರಿಸಿದ್ದ. 
 
ಪ್ರಕರಣವನ್ನು ದಾಖಿಲಿಸಿಕೊಂಡಿರುವ ಪೊಲೀಸರು ಹಂತಕನಿಗಾಗಿ ಶೋಧ ನಡೆಸಿದ್ದಾರೆ. ಸದಾ ಕಂಪನಿ ಕ್ಯಾಬ್ ಮೇಲೆ ಮನೆಗೆ ಮರಳುತ್ತಿದ್ದ ಅಂತರಾ ಅಂದು ನಡೆದುಕೊಂಡೇ ಹೋಗಿರುವುದು ಮಾತ್ರ ಹಲವು ಅನುಮಾನಗಳನ್ನು ಹುಟ್ಟಿ ಹಾಕಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.
 

Share this Story:

Follow Webdunia kannada

ಮುಂದಿನ ಸುದ್ದಿ

ಕೈಯಲ್ಲಿ ಗುದ್ದಲಿ ಹಿಡಿದು ಓಡಾಡಿದರೆ ಜನ ಮತ ಹಾಕ್ತಾರೇನ್ರಿ?: ಸಿಎಂಗೆ ಪ್ರಸಾದ್ ತಿರುಗೇಟು