Select Your Language

Notifications

webdunia
webdunia
webdunia
webdunia

ಫೇಸ್‌ಬುಕ್‌ಲ್ಲಿ ಖಾಸಗಿ ವಿಷಯ ಹಂಚಿಕೊಂಡಿದ್ದಕ್ಕೆ ಪತ್ನಿ ಕೊಂದು ನೇಣಿಗೆ ಶರಣಾದ ಟೆಕ್ಕಿ

ಫೇಸ್‌ಬುಕ್‌ಲ್ಲಿ ಖಾಸಗಿ ವಿಷಯ ಹಂಚಿಕೊಂಡಿದ್ದಕ್ಕೆ ಪತ್ನಿ ಕೊಂದು ನೇಣಿಗೆ ಶರಣಾದ ಟೆಕ್ಕಿ
ಪುಣೆ , ಶುಕ್ರವಾರ, 20 ಜನವರಿ 2017 (12:43 IST)
ಖಾಸಗಿ ವಿಷಯಗಳನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಳೆಂಬ ಕೋಪಕ್ಕೆ ಟೆಕ್ಕಿಯೊಬ್ಬ ಪತ್ನಿಯನ್ನು ಕೊಂದು ತಾನು ಕೂಡ ಆತ್ಮಹತ್ಯೆಗೆ ಶರಣಾದ ಹೇಯ ಘಟನೆ ಪುಣೆಯಲ್ಲಿ ನಡೆದಿದೆ. 

ಮೃತ ಆರೋಪಿ ರಾಕೇಶ್ ಗಂಗ್ಗುರ್ಡೆ ಎಂದು ನಗರದಲ್ಲಿನ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಈತನ ಪತ್ನಿ ಸೋನಾಲ್ ತಾವಿಬ್ಬರು ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುತ್ತಿರುವ ಕುರಿತು ಫೇಸ್‌ಬುಕ್ ಮತ್ತು ವಾಟ್ಸ್‌ಅಪ್‌ನಲ್ಲಿ ಹಂಚಿಕೊಂಡಿದ್ದಳು. 
 
ಕಳೆದೆರಡು ದಿನಗಳಿಂದ ಅಕ್ಕನಿಗೆ ಕರೆ ಮಾಡುತ್ತಿದ್ದ ಸೋನಾಲ್ ಸಹೋದರ ಹರ್ಷಾಲ್ ಪವಾರ್ ಆಕೆ ಪೋನ್ ಕರೆಯನ್ನು ಸ್ವೀಕರಿಸುತ್ತಿಲ್ಲವೆಂಬ ಹಿನ್ನೆಲೆಯಲ್ಲಿ ಹದಾಪ್ಸರ್ ಪ್ರದೇಶದಲ್ಲಿರುವ ಆಕೆಯ ಮನೆಗೆ ಭೇಟಿ ನೀಡಿದ್ದಾನೆ. ಹೊರಗಿನಿಂದ ಕದ ಹಾಕಿದ್ದರಿಂದ ನೆರೆಹೊರೆಯವರ ಸಹಾಯದಿಂದ ಮನೆಯೊಳಗೆ ಹೋಗಿ ನಡೆದಾಗ ಘಟನೆ ಬೆಳಕಿಗೆ ಬಂದಿದೆ.
 
ತಕ್ಷಣ ಪವಾರ್ ಪೊಲೀಸರಿಗೆ ಫೋನ್ ಕರೆ ಮಾಡಿದ್ದಾನೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಡೆತ್ ನೋಟ್‌ನ್ನು ವಶಪಡಿಸಿಕೊಂಡಿದ್ದು ಖಾಸಗಿ ವಿಚಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಕ್ಕೆ ಕೆಂಡಾಮಂಡಲನಾದ ರಾಕೇಶ್ ಈ ಹೀನಾಯ ಕೃತ್ಯವನ್ನೆಸಗಿದ್ದಾನೆ ಎಂದು ತಿಳಿದು ಬಂದಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಸೇರ್ಪಡೆಯಾಗುವ ಸುದ್ದಿ ಶುದ್ಧ ಸುಳ್ಳು: ವಿ.ಸೋಮಣ್ಣ ಯೂಟರ್ನ್