ಬೈಕ್ ಗಿಂತ ಕಾರಿನ ಎಂಜಿನ್ ಯಾಕೆ ಭಾರ; ರಾಹುಲ್ ಗಾಂಧಿ ತಲೆಗೆ ನೊಬೆಲ್ ಪ್ರೈಸ್ ಕೊಡ್ಬೇಕು ಎಂದ ಪಬ್ಲಿಕ್

Krishnaveni K
ಶನಿವಾರ, 4 ಅಕ್ಟೋಬರ್ 2025 (15:01 IST)
ನವದೆಹಲಿ: ಕೊಲಂಬಿಯಾ ಪ್ರವಾಸದ ವೇಳೆ ರಾಹುಲ್ ಗಾಂಧಿ ಸಂವಾದ ನಡೆಸುವಾಗ ಬೈಕ್ ಗಿಂತ ಕಾರು ಯಾಕೆ ಭಾರ ಎಂದು ವಿಚಿತ್ರವಾಗಿ ವಿಶ್ಲೇಷಣೆ ಮಾಡಿದ್ದು ಈಗ ಭಾರೀ ಟ್ರೋಲ್ ಗೊಳಗಾಗುತ್ತಿದೆ. ರಾಹುಲ್ ಗಾಂಧಿ ತಲೆಗೆ ನೊಬೆಲ್ ಪ್ರೈಸ್ ಕೊಡಬೇಕು ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.

ಕೊಲಂಬಿಯಾದಲ್ಲಿ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಾಹುಲ್ ಗಾಂಧಿ ಬೈಕ್ ನ ತೂಕ 100-150 ಕೆ.ಜಿ. ಅದೇ ಕಾರಿನ ತೂಕ 3,000 ಕೆ.ಜಿ ಯಾಕೆ? ಎಂದು ಪ್ರಶ್ನೆ ಮಾಡಿದ್ದಾರೆ. ಬಳಿಕ ಅದಕ್ಕೆ ತಮ್ಮದೇ ವಿಶ್ಲೇಷಣೆಯನ್ನೂ ನೀಡಿದ್ದಾರೆ.

ಅಪಘಾತವಾದಾಗ ಕಾರಿನಲ್ಲಿರುವ ವ್ಯಕ್ತಿಯ ಮೇಲೆ ಕಾರಿನ ಎಂಜಿನ್ ಬೀಳುತ್ತದೆ. ಅದೇ ಬೈಕ್ ಅಪಘಾತವಾದಾಗ ಬೈಕ್ ಎಂಜಿನ್ ದೂರ ಬೀಳುತ್ತದೆ. ಹಾಗಾಗಿ ಕಾರಿನಲ್ಲಿರುವವರ ರಕ್ಷಣೆಗೆ ಸಾಕಷ್ಟು ಪ್ರಮಾಣದಲ್ಲಿ ಲೋಹ ಬಳಕೆಯಾಗುತ್ತದೆ. ಹೀಗಾಗಿ ಇಲೆಕ್ಟ್ರಾನಿಕ್ ವಾಹನಗಳನ್ನು ಬಳಸುವುದೇ ಉತ್ತಮ’ ಎಂದೆಲ್ಲಾ ವಿಶ್ಲೇಷಣೆ ಮಾಡಿದ್ದರು.

ಅವರ ಈ ವಿಶ್ಲೇಷಣೆ ಈಗ ಭಾರೀ ಟ್ರೋಲ್ ಗೊಳಗಾಗಿದೆ. ರಾಹುಲ್ ಏನು ಹೇಳುತ್ತಿದ್ದಾರೆ ಎಂದು ಗೊತ್ತಾದರೆ ನಮಗೂ ಸ್ವಲ್ಪ ಹೇಳಿ ಎಂದು ಬಿಜೆಪಿ ಟ್ರೋಲ್ ಮಾಡಿದೆ. ಇನ್ನು ನೆಟ್ಟಿಗರೂ ಕಾಲೆಳೆದಿದ್ದು ಇವರು ಬೇಕೆಂದೇ ಇಂತಹ ಅಸಂಬದ್ಧ ಹೇಳಿಕೆ ನೀಡುತ್ತಾರೋ ಅಥವಾ ಗೊತ್ತಿಲ್ಲದೇ ಹೀಗೆಲ್ಲಾ ಮಾತನಾಡುತ್ತಾರೋ ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೆ ಕೆಲವರು ಅವರ ಅಪಾರ ಬುದ್ಧಿ ಮತ್ತೆಗೆ ಅತ್ಯುನ್ನತ ಪ್ರಶಸ್ತಿಯನ್ನೇ ಕೊಡಬೇಕು ಎಂದು ವ್ಯಂಗ್ಯ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿದ್ದರಾಮಯ್ಯ ಬೆಲೆಯೇರಿಕೆಯ ಬಾದ್ ಷಾ: ಬಿಜೆಪಿ ಕಟು ಟೀಕೆ

ಜನಮಗಣಮನ ಗೀತೆ ರಚಿಸಿದ್ದು ಬ್ರಿಟಿಷರಿಗಾಗಿ ಎಂದ ವಿಶ್ವೇಶ್ವರ ಹೆಗಡೆ ಕಾಗೇರಿ: ಆರ್ ಎಸ್ಎಸ್ ಪ್ರಭಾವವೆಂದ ಪ್ರಿಯಾಂಕ್ ಖರ್ಗೆ

ನಿಮ್ಮ ಸ್ಕಿನ್ ರೊಟೀನ್ ಏನು ಸಾರ್.. ಹರ್ಲಿನ್ ಡಿಯೋಲ್ ಪ್ರಶ್ನೆಗೆ ನಾಚಿಕೊಂಡ ಪ್ರಧಾನಿ ಮೋದಿ video

ರಾಹುಲ್ ಗಾಂಧಿ ಮತಗಳ್ಳತನ ಮಾಡಿದ್ದ ಬ್ರೆಜಿಲ್ ಮಾಡೆಲ್ ಶಾಕಿಂಗ್ ರಿಯಾಕ್ಷನ್

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ಮುಂದಿನ ಸುದ್ದಿ
Show comments