Webdunia - Bharat's app for daily news and videos

Install App

ಆಸ್ತಿಗಾಗಿ ಇಳಿ ವಯಸ್ಸಿನಲ್ಲಿ ತಂದೆ ಎನಿಸಿಕೊಂಡ್ರಾ ಮಾಜಿ ಶಾಸಕ ಸಂಭಾಜಿ ಪಾಟೀಲ್

Webdunia
ಗುರುವಾರ, 2 ಮೇ 2019 (10:42 IST)
ಬೆಳಗಾವಿ : ಎಂಇಎಸ್ ನ ಮಾಜಿ ಶಾಸಕ ಸಂಭಾಜಿ ಪಾಟೀಲ್ ಅವರಿಗೆ ಎರಡು ಮಗು ಹುಟ್ಟಿದೆ ಎಂಬ ಕೆಲವು ದಾಖಲೆಗಳು ಬಹಿರಂಗಗೊಂಡ ಹಿನ್ನಲೆಯಲ್ಲಿ ಸಂಭಾಜಿ ಪಾಟೀಲ್ ಇಳಿ ವಯಸ್ಸಿನಲ್ಲೂ ಗಂಡು ಮಗುವಿಗೆ ತಂದೆಯಾದರಾ ಎಂಬ ಅನುಮಾನ ಹುಟ್ಟು ಹಾಕಿದೆ.




ಸಂಭಾಜಿ ಪಾಟೀಲ್ ಇಲ್ಲಿಯವರೆಗೆ ನನಗೆ ಒಬ್ಬನೇ ಮಗ ಇದ್ದಾನೆ ಎಂದು ಹೇಳಿಕೊಂಡಿದ್ದರು. ಆದರೆ 2016ರಲ್ಲಿ ಮಹಾರಾಷ್ಟ್ರದ ಸಾಂಗ್ಲಿಯ ಸ್ವಾನಂದ ನರ್ಸಿಂಗ್ ಹೋಮ್‍ ನಲ್ಲಿ ಸಂಭಾಜಿ ಪಾಟೀಲ್ ಅವರ ಎರಡನೇ ಪತ್ನಿ ಉಜ್ವಲಾ ಗಂಡು ಮಗುವಿಗೆ ಜನ್ಮ ನೀಡಿದ ಕೆಲವು ದಾಖಲೆಗಳು ಬಹಿರಂಗಗೊಂಡಿದೆ.


ಆದರೆ ಇವರ ಸೊಸೆ ಶೀತಲ್ ಸಾಂಗ್ಲಿ ಅವರು, ಮೂರು ವರ್ಷದ ಹಿಂದೆ ಹುಟ್ಟಿರುವುದು ಮಗ ಅಲ್ಲ. ಅದು ನಕಲಿ ಜನನ ಪ್ರಮಾಣ ಪತ್ರ. ಆಸ್ತಿಗಾಗಿ ನಕಲಿ ಜನ್ಮ ಪ್ರಮಾಣ ಪತ್ರ ಪಡೆದು ಸೊಸೆಗೆ ವಂಚಿಸಲು ಯತ್ನಿಸುತ್ತಿದ್ದಾರೆ. ತಕ್ಷಣ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಮಾವನ ವಿರುದ್ಧ ದೂರು ದಾಖಲಿಸಿದ್ದಾರೆ. ಹಾಗೇ ಕಳೆದ ಮೂರು ತಿಂಗಳ ಹಿಂದೆ ಚಲಿಸುವ ರೈಲಿನಲ್ಲಿ ಆಯತಪ್ಪಿ ಬಿದ್ದು ಮಗ ಸಾಗರ್ ಮೃತ ಪಟ್ಟಿದ್ದು, ಸಹಜ  ಸಾವಲ್ಲ ಅದು ಕೊಲೆ ಎಂದು ಸೊಸೆ ಶೀತಲ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Air India Flight Crash: ತನಿಖೆಗೆ ಇದೇ ಮಹತ್ವದ ಸಾಕ್ಷಿ

ಸಿದ್ದರಾಮಯ್ಯ ಸರ್ ನನಗೆ ವೆರಿಗುಡ್ ಮಧು ಎಂದ್ರು: ಮಧು ಬಂಗಾರಪ್ಪ

ಏರ್ ಇಂಡಿಯಾ ಪತನವಾಗುವ ಮೊದಲು ಮೇಡೇ ಜೊತೆಗೆ ಹೀಗೂ ಹೇಳಿದ್ದ ಪೈಲಟ್

Gold Price: ದಾಖಲೆ ಬರೆದ ಪರಿಶುದ್ಧ ಚಿನ್ನದ ಬೆಲೆ

ಎಲ್ಲದಕ್ಕೂ ಕೇಂದ್ರದ ಮೇಲೆ ಗೂಬೆ ಕೂರಿಸುವುದೇ ಕಾಂಗ್ರೆಸ್ ಕೆಲಸ: ಬಿವೈ ವಿಜಯೇಂದ್ರ

ಮುಂದಿನ ಸುದ್ದಿ
Show comments