ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮಗಳು ಪ್ರಿಯಾಂಕಾ ಗಾಂಧಿ ಅವರಿಗೆ ಶಿಮ್ಲಾದ ಹೊರವಲಯದ ಛರಾಬಡಾದಲ್ಲಿ ಮನೆ ಕಟ್ಟಿಸಲು ನೀಡಿರುವ ಪರವಾನಿಗೆಯನ್ನು ರದ್ದು ಪಡಿಸಬೇಕೆಂದು ಬಿಜೆಪಿ ಶಾಸಕ ಸುರೇಶ್ ಭಾರದ್ವಾಜ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಇದು ಹೆಚ್ಚಿನ ಭದ್ರತೆಯ ವಲಯವಾಗಿರುವುದರಿಂದ ಅವರು ಈ ಕೋರಿಕೆಯನ್ನು ಮುಂದಿಟ್ಟಿದ್ದಾರೆ.
ರಾಷ್ಟ್ರಪತಿ ಅವರ ಬೇಸಿಗೆ ಕಾಲದ ನಿವಾಸ (ದಿ ರಿಟ್ರೀಟ್)ಬಳಿ ಈ ಮನೆಯನ್ನು ಕಟ್ಟಲಾಗುತ್ತಿದ್ದು ಕಳೆದ 6 ವರ್ಷಗಳಿಂದ ಈ ಮನೆ ನಿರ್ಮಾಣ ಕಾರ್ಯ ನಡೆಯುತ್ತಿದೆ.
ಈ ಮನೆ ರಾಷ್ಟ್ರಪತಿ, ಪ್ರಧಾನಿ ಮತ್ತು ಇತರ ಗಣ್ಯರಿಗೆ ಭದ್ರತಾ ಅಪಾಯವನ್ನು ತಂದೊಡ್ಡುತ್ತಿದೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಬರೆದಿರುವ ಪತ್ರದಲ್ಲಿ ಭಾರದ್ವಾಜ್ ಆರೋಪಿಸಿದ್ದಾರೆ.
ಈ ಹಿಂದೆ ಅನೇಕರಿಗೆ 'ದಿ ರಿಟ್ರೀಟ್' ಬಳಿ ಮನೆಗಳನ್ನು ನಿರ್ಮಿಸುವುದಕ್ಕೆ ಅನುಮತಿಯನ್ನು ನಿರಾಕರಿಸಲಾಗಿತ್ತು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.