Webdunia - Bharat's app for daily news and videos

Install App

ಇಂತಹ ಮಹಾನ್ ದೇಶಕ್ಕೆ ಬಂದಿರುವುದು ಮಹಾಪುಣ್ಯ: ಇಸ್ರೇಲ್ ಅಧ್ಯಕ್ಷ

Webdunia
ಮಂಗಳವಾರ, 15 ನವೆಂಬರ್ 2016 (17:20 IST)
ಭಾರತದಂತಹ ಮಹಾನ್ ದೇಶಕ್ಕೆ ಭೇಟಿ ನೀಡಿರುವುದು ನನ್ನ ಪುಣ್ಯ ಎಂದು ಇಸ್ರೇಲ್ ಅಧ್ಯಕ್ಷ ರಿವೇನ್ ರಿವ್ಲಿನ್ ಹೇಳಿದ್ದಾರೆ.

ಆರು ದಿನಗಳ ಭಾರತ ಪ್ರವಾಸಕ್ಕೆ ಬಂದಿರುವ ರಿವೇನ್ ರಿವ್ಲಿನ್ ಮಂಗಳವಾರ ಮುಂಬೈಗೆ ಬಂದಿಳಿದರು.  ಭೇಟಿ ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ಅವರಿಗೆ ವಿಧ್ಯುಕ್ತ ಸ್ವಾಗತ ಕೋರಲಾಯಿತು. 
 
ರಾಷ್ಟ್ರಪತಿ ಪ್ರಣವ್ ಮುಖರ್ಜಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ರಿವ್ಲಿನ್ ಅವರಿಗೆ ಹೃದಯಸ್ಪರ್ಶಿ ಸ್ವಾಗತವನ್ನು ನೀಡಿದರು. 
 
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ರಿವ್ಲಿನ್, ಈ ಮಹಾನ್ ದೇಶಕ್ಕೆ ಕಾಲಿಟ್ಟಿರುವುದು ನನ್ನ ಪುಣ್ಯ. ನನಗೆ ಸಿಕ್ಕಿರುವ ಸ್ವಾಗತಕ್ಕೆ ನನಗೆ ಹೆಮ್ಮೆ ಎನ್ನಿಸುತ್ತಿದೆ ಎಂದಿದ್ದಾರೆ. 
 
ಭಯೋತ್ಪಾದನೆ ವಿರುದ್ಧ ಹೋರಾಡಲು ನಾವು ಭಾರತಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ಅವರು ಪ್ರತಿಜ್ಞೆ ಮಾಡಿದ್ದಾರೆ.
 
ಬರೊಬ್ಬರಿ ಎರಡು ದಶಕಗಳ ನಂತರ ಭಾರತಕ್ಕೆ ಬಂದಿರುವ ಪ್ರಥಮ ಅಧ್ಯಕ್ಷ ಎನ್ನಿಸಿಕೊಂಡಿದ್ದಾರೆ ರಿವ್ಲಿನ್.
 
ಪ್ರಧಾನಿ ಮೋದಿ ಜತೆ ರಿವ್ಲಿನ್ ಇಂದು ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಿ.ಆರ್ ಪಾಟೀಲ್ ಸತ್ಯವನ್ನೇ ಹೇಳಿದ್ದಾರೆ : ವಿಜಯೇಂದ್ರ

ಇರಾನ್ ಮೇಲೆ ಅಮೆರಿಕೆ ಏರ್‌ಸ್ಟ್ರೈಕ್‌‌: ಡೊನಾಲ್ಡ್ ಟ್ರಂಪ್ ಗಂಡೆದೆಯನ್ನು ಕೊಂಡಾಡಿದ ಇಸ್ರೇಲ್ ಪ್ರಧಾನಿ

ಪಹಲ್ಗಾಮ್‌ ದಾಳಿ: ಪಾಕ್‌ ಉಗ್ರರಿಗೆ ಆಶ್ರಯ ನೀಡಿದ್ದ ಇಬ್ಬರು ಅರೆಸ್ಟ್‌

ಸ್ಟೇಟ್ ಸ್ಪಾನ್ಸರ್ ಕರಪ್ಷನ್‌ಗೆ ರಾಜ್ಯದ ಕಾಂಗ್ರೆಸ್‌ ಸರ್ಕಾರವೇ ಉತ್ತೇಜನ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆರೋಪ

ಸ್ನೇಹಿತರೊಂದಿಗೆ ತೋಟದ ಮನೆಗೆ ಪಾರ್ಟಿಗೆ ತೆರಳಿದ್ದ ಯುವಕರಿಬ್ಬರು ಕೃಷಿಹೊಂಡದಲ್ಲಿ ಜಲಸಮಾಧಿ

ಮುಂದಿನ ಸುದ್ದಿ
Show comments