Webdunia - Bharat's app for daily news and videos

Install App

ಹಲ್ಲೆ ಆರೋಪ: ಜಾಮೀನಿನ ಮೇಲೆ ದುನಿಯಾ ವಿಜಿ ಬಿಡುಗಡೆ

Webdunia
ಮಂಗಳವಾರ, 15 ನವೆಂಬರ್ 2016 (17:07 IST)
ಸ್ನೇಹಿತ ಶಂಕರ್ ಕೌಟುಂಬಿಕ ವಿಚಾರದಲ್ಲಿ ಮೂಗು ತೂರಿಸಿದ್ದಲ್ಲದೆ ವ್ಯಕ್ತಿಯೊಬ್ಬರಿಗೆ ಹಲ್ಲೆ ಮಾಡಿದ ಆರೋಪದ ಮೇಲೆ ಬಂಧನಕ್ಕೊಳಗಾದ ನಟ ದುನಿಯಾ ವಿಜಿ ಅವರು ಸ್ಟೇಷನ್ ಬೆಲ್ ಮೇಲೆ ಬಿಡುಗಡೆಯಾಗಿದ್ದಾರೆ.
 
ದುನಿಯಾ ವಿಜಿ ವಿರುದ್ಧ ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷೆನ್ 324 ಹಾಗೂ 504 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ದುನಿಯಾ ವಿಜಿ ಅವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು. ಬಳಿಕ ನ್ಯಾಯಲಯಕ್ಕೆ ಹಾಜರು ಪಡಿಸಿದ್ದು, ಇದೀಗ ವಿಜಿ ಅವರು ಸ್ಪೇಷಲ್ ಬೆಲ್ ಮೇಲೆ ಬಿಡುಗಡೆಯಾಗಿದ್ದಾರೆ.
 
ಮಾಸ್ತಿ ಗುಡಿ ದುರಂತ ವಿವಾದ ಮಾಸುವ ಮೊದಲೇ ದುನಿಯಾ ವಿಜಿ ಮತ್ತೊಂದು ವಿವಾದಲ್ಲಿ ಸಿಲುಕಿದ್ದು, ಸ್ನೇಹಿತ ಶಂಕರ್ ಕೌಟುಂಬಿಕ ವಿಚಾರದಲ್ಲಿ ಮೂಗು ತೂರಿಸಿದ್ದಲ್ಲದೆ ವ್ಯಕ್ತಿಯೊಬ್ಬರಿಗೆ ಹಲ್ಲೆ ಮಾಡಿದ ಆರೋಪ ಎದುರಿಸುತ್ತಿದ್ದರು.
 
ಶಂಕರ್ ಹಾಗೂ ದುನಿಯಾ ವಿಜಿ ಸ್ನೇಹಿತರಾಗಿದ್ದು, ಅವರ ಪತ್ನಿ ಮಾನಸಾ ಅವರನ್ನು ಕರೆತರಲು ಪೋಷಕರು ಬಂದಾಗ ಎರಡೂ ಕುಟುಂಬದವರ ನಡುವೆ ವಾದ ವಿವಾದವಾಗಿದೆ. ಈ ಸಂದರ್ಭದಲ್ಲಿ ಸ್ನೇಹಿತರು ಕರೆ ಮಾಡಿ ದುನಿಯಾ ವಿಜಿ ಅವರನ್ನು ಸ್ಥಳಕ್ಕೆ ಕರೆಸಿದ್ದು, ಅವರೂ ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಲು ಮುಂದಾಗಿದ್ದರು.
 
ಈ ಸಂದರ್ಭದಲ್ಲಿ ದುನಿಯಾ ವಿಜಿ ಮಾನಸಾ ತಂದೆ ಜಯರಾಂ ಕೆನ್ನೆಗೆ ಹೊಡೆದಿದ್ದಲ್ಲದೆ, ಎದೆಗೆ ಒದ್ದಿದ್ದಾರೆ. ಇದರಿಂದಾಗಿ ಅವರು ಹೃದಯಾಘಾತಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ. ಮಾನಸಾ ಮತ್ತು ಶಂಕರ್ ನಡುವೆ ವೈವಾಹಿಕ ಜೀವನದಲ್ಲಿ ಮನಸ್ತಾಪವಿತ್ತು. ಮಾನಸಾ ಅವರಿಗೆ ಹೆತ್ತವರ ಜತೆ ಸಂಪರ್ಕಿಸಲೂ ಶಂಕರ್ ಬಿಡುತ್ತಿರಲಿಲ್ಲ ಎನ್ನುವುದು ಮಾನಸಾ ಪೋಷಕರ ಆರೋಪವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇದು ಸೇವೆಗಾಗಿ ಬಂದ ಕಾಂಗ್ರೆಸ್ ಅಲ್ಲ, ವ್ಯಾಪಾರಕ್ಕಾಗಿ ಬಂದಿದ್ದು: ಛಲವಾದಿ ನಾರಾಯಣಸ್ವಾಮಿ

ಸಾಲಗಾರನ ಮಗಳನ್ನು ಕರೆದೊಯ್ದ ಪ್ರಕರಣ: ಆರೋಪಿ ಅರೆಸ್ಟ್‌

ನನ್ನ ಶೂ ನೆಕ್ಕಲು ಸಹ ಅರ್ಹನಲ್ಲ: ಅಧಿಕಾರಿಗಳ ವಿರುದ್ಧ ಜಾತಿ ನಿಂದನೆ ದೂರು ಕೊಟ್ಟ ಇಂಡಿಗೋ ಸಿಬ್ಬಂದಿ

ಜಮ್ಮುನಲ್ಲಿ ಲ್ಯಾಂಡಿಂಗ್‌ ಆಗಬೇಕಿದ್ದ ಏರ್‌ ಇಂಡಿಯಾ ವಿಮಾನ ದೆಹಲಿಗೆ ವಾಪಸ್‌: ಕಾರಣ ನಿಗೂಢ

ಬೆಂಗಳೂರಿನಲ್ಲಿ ಏನಾಗುತ್ತಿದೆ, ಯುವತಿಗೆ ಹಾಡಹಗಲೇ ಮೈಕೈ ಮುಟ್ಟಿ ಲೈಂಗಿಕ ಕಿರುಕುಳ

ಮುಂದಿನ ಸುದ್ದಿ
Show comments